ಬೆಂಗಳೂರು : ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯಿಂದ ಹಾಗೂ ಅರು ಕ್ರಿಯೇಶನ್ಸ್ ಮತ್ತು ಬುಕ್ ಬ್ರಹ್ಮದ ಸಹಯೋಗದೊಂದಿಗೆ 15 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19 ಅಕ್ಟೋಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕ.ಸಾ.ಪ. ಆವರಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಡಸಾಲೆ ಪುಟ್ಟಸ್ವಾಮಯ್ಯ ಇವರ ವಹಿಸಲಿದ್ದು, ಶ್ರೀಮತಿ ಮೇಘನಾ ಸುಧೀಂದ್ರ ಮತ್ತು ಶ್ರೀಮತಿ ನಿವೇದಿತಾ ಎಚ್. ಇವರು ಕೃತಿಗಳ ಪರಿಚಯ ಮಾಡಲಿದ್ದಾರೆ. ಹಂದಲಗೆರೆ ಗಿರೀಶ್, ಸ. ಹರೀಶ್, ಡಾ. ಪ್ರದೀಪ್ ಬೇಲೂರು ಮತ್ತು ಶ್ರೀಮತಿ ಆಶಾ ರಘು ಇವರುಗಳು ಭಾಗವಹಿಸಲಿದ್ದಾರೆ.
ಹೊಸ ಕೃತಿಗಳಾದ ‘ಅಮ್ಮ ಅಂದ್ರೆ ಭೂಮಿ’, ‘ಸುಡೋಕು’, ಅದೃಶ್ಯ ಬೇರುಗಳು ಮತ್ತು ‘ಹೂಮಾಲೆಯಾದ ಅಂಡಾಳು’ ಹಾಗೂ ಮರು ಮುದ್ರಣವಾಗುತ್ತಿರುವ ಕೃತಿಗಳು ಹಂದಲಗೆರೆ ಗಿರೀಶ್ ಇವರ ‘ನೀರ ಮೇಗಿಲ ಸಹಿ’ ಮತ್ತು ‘ನೇಗಿಲ ಗೆರೆ’ ಆಶಾ ರಘು ಇವರ ‘ಮಾಯೆ’, ‘ಗತ’, ‘ಆರನೇ ಬೆರಳು’, ‘ಕೆಂಪು ದಾಸವಾಳ’, ‘ಬೊಗಸೆಯಲ್ಲಿ ಕಥೆಗಳು’, ‘ಅಪರೂಪದ ಪುರಾಣ ಕಥೆಗಳು’, ‘ಚೂಡಾಮಣಿ’, ‘ಕ್ಷಮಾದಾನ’ ಮತ್ತು ‘ಬಂಗಾರದ ಪಂಜರ ಮತ್ತಿತರ ಮಕ್ಕಳ ನಾಟಕಗಳು’.