ಸಾಗರ : ಪಾಂಚಜನ್ಯ ಕಲಾವೇದಿಕೆ ಅಂಬಾರಗೋಡ್ಲು ಇವರ ವತಿಯಿಂದ ಯಕ್ಷಗಾನ – ಸಾಹಿತ್ಯ – ಚಿತ್ರ ಸಹಿತವಾದ ಅಪರೂಪದ ಬೌದ್ಧಿಕ ಕ್ರೀಡೆ ‘ಯಕ್ಷಗಾನ ಅಷ್ಟಾವಧಾನ’ ಕಾರ್ಯಕ್ರಮವನ್ನು ದಿನಾಂಕ 18 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಸಾಗರದ ಕುಡುಪಲಿ ಸ್ವರಲಾಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಶುಕವಿತೆ : ಶ್ರೀ ಗಜಾನನ ಹೆಗಡೆ ಅಡೇಮನೆ, ಅಪ್ರಸ್ತುತ ಪ್ರಸಂಗ : ಡಾ. ಗಜಾನನ ಶರ್ಮ ಹುಕ್ಲು, ಸಮಸ್ಯಾಪೂರಣ : ಶ್ರೀ ದಿವಾಕರ ಹೆಗಡೆ ಕೆರೆಹೊಂಡ, ಯಕ್ಷ ಗಾಯನ : ಶ್ರೀ ಯಕ್ಷೇಶ್ವರ ಹೆಗಡೆ ಅಂಬಾರಗೋಡ್ಲು. ಮದ್ದಲೆ – ಶ್ರೀ ಚಿನ್ಮಯ ಹೆಗಡೆ, ಚಂಡೆ – ಶ್ರೀ ಮಿತ್ರ ಮಧ್ಯಸ್ಥ, ನಿಷೇಧಾಕ್ಷರಿ : ವೇದ ಮೂರ್ತಿ ಅಜಿತ್ ಕಾರಂತ ತೋಟದೂರು, ಚಿತ್ರ – ಪದ್ಯ : ಶ್ರೀಮತಿ ವಿಜಯಶ್ರೀ ನಟರಾಜ್ ಬೆಂಗಳೂರು. ದತ್ತಪದಿ : ಡಾ. ಶಿವಕುಮಾರ ಅಳಗೋಡು, ಸಂಖ್ಯಾ ಬಂಧ : ಶ್ರೀ ಎ.ಜಿ. ರಮೇಶ ಹುಕ್ಲು.