ಕೋಟ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ಐವತ್ತರ ವರುಷ – ನವೋಲ್ಲಾಸದ ಹರುಷ ಪ್ರಯುಕ್ತ ನಡೆದ ಸುವರ್ಣ ಪರ್ವದ ಸಮಾರೋಪ ಸಂಭ್ರಮವನ್ನು ದಿನಾಂಕ 19 ಅಕ್ಟೋಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಕೋಟ ಮೂರ್ಕೈ ಕೋಟ ವಿವೇಕ ವಿದ್ಯಾ ಸಂಸ್ಥೆ ಗಾಂಧಿ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಲಿಗ್ರಾಮ ಮಕ್ಕಳ ಮೇಳದ ಹಿರಿಯ ಪ್ರಾಕ್ತನ ವಿದ್ಯಾರ್ಥಿಗಳಿಂದ ರತ್ನಪುರದ ರಾಮ ವಿರಚಿತ ‘ತಾಮ್ರಧ್ವಜ ಕಾಳಗ’ ಮತ್ತು ವೃತ್ತಿ ಮೇಳಗಳ ಆಹ್ವಾನಿತ ಕಲಾವಿದರಿಂದ ಮೂಲ್ಕಿ ರಾಮಕೃಷ್ಣಯ್ಯ ವಿರಚಿತ ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 4-00 ಗಂಟೆಗೆ ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ಸ್ಥಾಪಕ ನಿರ್ದೇಶಕರಾದ ಹೆಚ್. ಶ್ರೀಧರ ಹಂದೆ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ. ಶ್ಯಾಮ ಭಟ್ ಇವರು ವಹಿಸಲಿದ್ದಾರೆ. ಮುಖ್ಯ ಅಭಾಗತರಾಗಿ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ, ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಇದರ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷರಾದ ಡಾ. ಎಮ್. ಮೋಹನ್ ಆಳ್ವ, ಯಕ್ಷಗಾನ ವಿದ್ವಾಂಸ ಡಾ. ಎಮ್. ಪ್ರಭಾಕರ ಜೋಷಿ, ಗೀತಾನಂದ ಫೌಂಡೇಷನ್ ಪ್ರವರ್ತಕರಾದ ಆನಂದ ಸಿ. ಕುಂದರ್ ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪಿ. ಪ್ರಭಾಕರ ಮಯ್ಯ ಇವರುಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಶಿಕ್ಷಕರಾದ ಚೇರ್ಕಾಡಿ ಮಂಜುನಾಥ ಪ್ರಭು, ಎನ್. ಉದಯ ಕುಮಾರ ಮಧ್ಯಸ್ಥ ಮತ್ತು ಹೆಮ್ಮಾಡಿ ಪ್ರಭಾಕರ ಆಚಾರ್ ಇವರುಗಳಿಗೆ ‘ಸುವರ್ಣ ಪರ್ವ ಗೌರವ ಪುರಸ್ಕಾರ ಹಾಗೂ ಮನೋಜ್ ಭಟ್ ಬೆಂಗಳೂರು ಮತ್ತು ನವೀನ್ ಮಣೂರು ಇವರಿಗೆ ‘ಸುವರ್ಣ ಪರ್ವ ವಿಶೇಷ ಯುವ ಪುರಸ್ಕಾರ’ ನೀಡಿ ಸನ್ಮಾನಿಸಲಾಗುವುದು.