ಹಾಸನ : ಮಾಣಿಕ್ಯ ಪ್ರಕಾಶನ (ರಿ.) ಹಾಸನ ಸಂಸ್ಥೆಯು ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳಿಗೆ ಪ್ರತಿವರ್ಷ ಕೊಡಮಾಡುವ ದತ್ತಿ ಪ್ರಶಸ್ತಿಗಳಿಗೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಸ್ವತಂತ್ರ ಕೃತಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನೂರಾರು ಕವಿ-ಸಾಹಿತಿಗಳು ಕೃತಿಗಳನ್ನು ಕಳಿಸಿಕೊಟ್ಟಿದ್ದರು. ಹಿರಿಯ ಸಾಹಿತಿಗಳ ಸಮಿತಿಯನ್ನು ರಚಿಸಿ ಅರ್ಹ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ದಿನಾಂಕ 02 ನವೆಂಬರ್ 2025ರ ಭಾನುವಾರ ನಗರದ ಸಂಸ್ಕೃತ ಭವನದಲ್ಲಿ ಪ್ರಕಾಶನವು ಹಮ್ಮಿಕೊಳ್ಳುವ ದಶಮಾನೋತ್ಸವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
ಹಿರಿಯ ಸಾಹಿತಿ ಡಾ. ರಂಜಾನ್ ದರ್ಗಾ, ಎನ್. ಶೈಲಜಾ ಹಾಸನ, ಕೊಟ್ರೇಶ್ ಎಸ್. ಉಪ್ಪಾರ್, ಟಿ. ಸತೀಶ್ ಜವರೇಗೌಡ, ಪ್ರಭಾವತಿ ಶೆಡ್ತಿ, ರೇಷ್ಮಾ ಕಂದಕೂರು, ಡಾ. ಅಮರೇಶ ಪಾಟೀಲ, ಡಾ. ವಿಶ್ವೇಶ್ವರ ಎನ್. ಮೇಟಿ, ಡಾ. ಎಚ್.ಕೆ. ಹಸೀನಾ, ಲತಾಮಣಿ ಎಂ.ಕೆ. ತುರುವೇಕೆರೆ, ಪದ್ಮಾವತಿ ವೆಂಕಟೇಶ್, ನೀಲಾವತಿ ಸಿ.ಎನ್., ಎಚ್.ಎಸ್. ಬಸವರಾಜ್, ನಾಗರಾಜ್ ದೊಡ್ಡಮನಿ, ವಾಸು ಸಮುದ್ರವಳ್ಳಿ, ದೇಸು ಆಲೂರು ಇವರನ್ನೊಳಗೊಂಡ ಆಯ್ಕೆ ಸಮಿತಿಯು ಆಹ್ವಾನಿತ ಕೃತಿಗಳನ್ನು ಅವಲೋಕಿಸಿ ಪ್ರತಿ ದತ್ತಿ ಬಹುಮಾನಕ್ಕೂ ಎರೆಡೆರಡು ಕೃತಿಗಳಿಗೆ ಹಂಚಿಕೆ ಮಾಡುವುದರ ಮೂಲಕ ಆಯ್ಕೆ ಪ್ರಕ್ರಿಯೆ ಮಾಡಿದ್ದಾರೆ. ದಶಮಾನೋತ್ಸವ ಸಂದರ್ಭದ ನಿಮಿತ್ತ ಪ್ರತಿ ದತ್ತಿಯ ನಗದು ಬಹುಮಾನವನ್ನು ಎರೆಡೆರಡು ಕೃತಿಗಳಿಗೆ ಹಂಚಿಕೆ ಮಾಡಲಾಗಿದೆ.
ಬಹುಮಾನಿತ ಕೃತಿಗಳು ಹಾಗೂ ಲೇಖಕರ ವಿವರ ಈ ಕೆಳಕಂಡಂತಿದೆ
‘ಎನ್. ಶೈಲಜಾ ಹಾಸನ ದತ್ತಿ – ಪ್ರಬಂಧ ಮಾಣಿಕ್ಯ ಪ್ರಶಸ್ತಿ’ : ಪ್ರಶಸ್ತಿ ಪುರಸ್ಕೃತರು : ‘ಕೃಶಕಾಯದ ಕರಕರೆ’ – ಲತಾ ಹೆಗಡೆ ಧಾರವಾಡ, ‘ಐಸ್ ಪೈಸ್’ – ನಳಿನಿ ಟಿ. ಭೀಮಪ್ಪ ಧಾರವಾಡ.
‘ದಿ. ಸಿ.ಪಿ. ನಾರಾಯಣಾಚಾರ್ಯ ಸ್ಮಾರಕ ದತ್ತಿ – ಕಾವ್ಯ ಮಾಣಿಕ್ಯ ಪ್ರಶಸ್ತಿ’ : ಪ್ರಶಸ್ತಿ ಪುರಸ್ಕೃತರು : ಪ್ರಥಮ – ‘ಬೆಂದ ಬೆಳಸಿ’ ಎ.ಎ. ದರ್ಗಾ ಧಾರವಾಡ. ‘ಪ್ಯೂಪಾ’ – ಶಶಿ ತರೀಕೆರೆ ಚಿಕ್ಕಮಗಳೂರು. ದ್ವಿತೀಯ – ‘ಕಾದ ಕಂಗಳ ಕಂಪನ’ – ಎನ್.ಆರ್. ರೂಪಶ್ರೀ, ಮೈಸೂರು. ‘ಕಿರು ಬೆಳಕಿನ ಸೂಜಿ’ – ಗೀತಾಮಂಜು ಬೆಣ್ಣೆಹಳ್ಳಿ, ದಾವಣಗೆರೆ.
‘ಪದ್ಮಾವತಿ ವೆಂಕಟೇಶ್ ದತ್ತಿ ಕಥಾ ಮಾಣಿಕ್ಯ ಪ್ರಶಸ್ತಿ’ – ಪ್ರಶಸ್ತಿ ಪುರಸ್ಕೃತರು : ‘ಉರಿವ ದೀಪದ ಕೆಳಗೆ’ – ಹಡವನಹಳ್ಳಿ ವೀರಣ್ಣಗೌಡ ತುಮಕೂರು, ‘ಪದ್ದವ್ವನ ಕೌದಿ & ಇತರ ಕಥೆಗಳು’ ಸುನೀತಾ ಪ್ರಕಾಶ್ ದಾವಣಗೆರೆ.
‘ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ – ಸಂಶೋಧನಾ ಮಾಣಿಕ್ಯ ಪ್ರಶಸ್ತಿ’ – ಪ್ರಶಸ್ತಿ ಪುರಸ್ಕೃತರು : ‘ಮುಂಬಯಿ ಮತ್ತು ಮಹಿಳೆ’ ಸುಖಲಾಕ್ಷಿ ವೈ. ಸುವರ್ಣ ದಕ್ಷಿಣ ಕನ್ನಡ. ‘ದಾಸೊಕ್ಕಲಿಗರು’ – ಡಾ. ಹಂಪನಹಳ್ಳಿ ತಿಮ್ಮೇಗೌಡ ಹಾಸನ.
‘ಪ್ರಭಾವತಿ ಶೆಡ್ತಿ ದತ್ತಿ – ನಾಟಕ ಮಾಣಿಕ್ಯ ಪ್ರಶಸ್ತಿ’ – ಪ್ರಶಸ್ತಿ ಪುರಸ್ಕೃತರು : ‘ಕಲ್ಯಾಣದ ಕ್ರಾಂತಿ’ – ಮಲ್ಲೇಶ ಬಿ. ಕೋನಾಳ, ಯಾದಗಿರಿ. ‘ಮೂರು ಮತ್ತೊಂದು ನಾಟಕಗಳು’ – ಡಾ. ವೀಣಾ ಸಂಕನಗೌಡರ ಧಾರವಾಡ.
‘ದಿ. ಮಹಾದೇವಮ್ಮ, ದಿ. ಈ. ಕೃಷ್ಣಯ್ಯ ಸ್ಮಾರಕ ದತ್ತಿ – ಕಾದಂಬರಿ ಮಾಣಿಕ್ಯ ಪ್ರಶಸ್ತಿ’ : ಪ್ರಶಸ್ತಿ ಪುರಸ್ಕೃತರು : ‘ಪವಿತ್ರ ಪ್ರೀತಿ ಪ್ರಾಪ್ತಿ’ ಉಳುವಂಗಡ ಕಾವೇರಿ ಉದಯ ಕೊಡಗು. ‘ಬೇಲಿಯನ್ನು’ ರಂಜಿತಾ ಮಹಾಜನ, ಬೆಳಗಾವಿ.
‘ದಿ. ಫಾತಿಮಾಭಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ – ಗಜಲ್ ಮಾಣಿಕ್ಯ ಪ್ರಶಸ್ತಿ’ : ಪ್ರಶಸ್ತಿ ಪುರಸ್ಕೃತರು : ‘ನಿನ್ನ ಜೊತೆ ಜೊತೆಯಲಿ’ – ಡಾ. ಸಿದ್ಧರಾಮ ಹೊನ್ನಲ್ ಯಾದಗಿರಿ. ‘ನೆಲ ನುಡಿದ ನಾದ’ – ಯು. ಸಿರಾಜ್ ಅಹಮದ್, ಶಿವಮೊಗ್ಗ.
‘ಕೆ. ವೈ. ಕಂದಕೂರ ದತ್ತಿ – ಚುಟುಕು ಮಾಣಿಕ್ಯ ಪ್ರಶಸ್ತಿ’ : ಪ್ರಶಸ್ತಿ ಪುರಸ್ಕೃತರು : ‘ಹನಿಗಡಲು’ – ಹಸೀನ ಮಲ್ನಾಡ್ ದಕ್ಷಿಣ ಕನ್ನಡ. ‘ಹಾಯ್ಕು ಹನಿ’ – ಶ್ವೇತಾ ನರಗುಂದ, ಬೆಳಗಾವಿ.
‘ದಿ. ದೊಡ್ಡಚಂದಪ್ಪ ತಳ್ಳಿ ಪಾಟೀಲ ಸ್ಮಾರಕದತ್ತಿ ವಚನ ಮಾಣಿಕ್ಯ ಪ್ರಶಸ್ತಿ’ : ಪ್ರಶಸ್ತಿ ಪುರಸ್ಕೃತರು : ‘ಶರಣ ಸೌರಭ’ – ಜಯಶ್ರೀ ಸುಕಾಲೆ ಬೀದರ. ‘ವಚನ ಮಂದಾರ’ – ಸುಶೀಲಾ ಸೋಮಶೇಖರ್ ಹಾಸನ.