ಬೈಂದೂರು : ‘ಸುರಭಿ’ ಬೈಂದೂರು ಸಾಂಸ್ಕೃತಿಕ, ಸಾಹಿತ್ಯ, ಸೇವಾ ಪ್ರತಿಷ್ಠಾನದ ಬೆಳ್ಳಿಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸ್ಪರ್ಧೆಯು ಡಿಸೆಂಬರ್ 3ನೇ ವಾರದಲ್ಲಿ ಬೈಂದೂರಿನ ಯಡ್ತರೆ ಜೆ. ಎನ್. ಆರ್. ಕಲಾಮಂದಿರದ ಬಯಲು ರಂಗಮಂಟಪದಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಕಾಸರಗೋಡು ಹಾಗೂ ರಾಜ್ಯದ ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡ ಭಾಗವಹಿಸಬಹುದು. ಕನಿಷ್ಠ 1.30 ಗಂಟೆ, ಗರಿಷ್ಠ 2.15 ಗಂಟೆ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ, ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. 8 ತಂಡಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಆನಂದ ಮದ್ದೋಡಿ ತಿಳಿಸಿದ್ದಾರೆ.
ವಿಜೇತ ತಂಡಗಳಿಗೆ ಪ್ರಥಮ ರೂಪಾಯಿ 40 ಸಾವಿರ, ದ್ವಿತೀಯ ರೂಪಾಯಿ 30 ಸಾವಿರ, ತೃತೀಯ ರೂಪಾಯಿ 20 ಸಾವಿರ ನಗದು ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಗುವುದು. ಜೊತೆಗೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗ ಪರಿಕರ, ಪ್ರಸಾಧನ, ಬಾಲನಟ, ಹಾಸ್ಯ ಪಾತ್ರಗಳಿಗೆ ನಗದು ಸಹಿತ ಬಹುಮಾನ ನೀಡಲಾಗುವುದು. ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಬೈಂದೂರಿಗೆ ಬಂದು ಹೋಗುವ ಪ್ರಯಾಣದ ವೆಚ್ಚ (ಪ್ರಯಾಣದ ಅಂತರ ನಿರ್ಧರಿಸಿ) ನೀಡಲಾಗುವುದು. ಪ್ರತಿ ತಂಡಕ್ಕೆ ರೂಪಾಯಿ 5 ಸಾವಿರ ಗೌರವಧನ ನೀಡಲಾಗುವುದು.
ಆಸಕ್ತ ತಂಡಗಳು ಸುರಭಿ ಬೈಂದೂರು ಇದರ ನಿರ್ದೇಶಕರಾದ ಸುಧಾಕರ ಪಿ. 8217779338, ನಾಗರಾಜ ಪಿ. ಯಡ್ತರೆ 9343743340 ಇವರನ್ನು ಸಂಪರ್ಕಿಸಬಹುದು.