ಬಾಗಲಕೋಟೆ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ ಮತ್ತು ಆಕೃತಿ ಕನ್ನಡ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ‘ಮೂಡಲ ಮನೆ’ ಖ್ಯಾತಿಯ ಹೂಲಿ ಶೇಖರ್ ಇವರ ‘ಸ್ವಾತಂತ್ರ್ಯದ ಕಿಡಿಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ಬಾಗಲಕೋಟೆಯ ನವನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ನಾಟಕಕಾರರಾದ ಡಾ. ಡಿ.ಎಸ್. ಚೌಗಲೆ ಇವರು ಕೃತಿ ಬಿಡುಗಡೆ ಮಾಡಲಿದ್ದು, ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಬಸು ಬೇವಿನಗಿಡದ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಾಹಿತಿಗಳಾದ ಡಾ. ವಾಯ್ ಎಂ. ಯಾಕೊಳ್ಳಿ ಮತ್ತು ಡಾ. ಚಂದ್ರಶೇಖರ್ ಹೆಗಡೆ ಇವರು ಕೃತಿ ಪರಿಚಯ ಮಾಡಲಿದ್ದಾರೆ.