ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ತ್ರೈ ಮಾಸಿಕ ‘ಕೊಡವೋಲೆ’ ಸಂಚಿಕೆ ಪ್ರಕಟಿಸಲಾಗುತ್ತಿದ್ದು ಸ್ವ-ರಚಿತ ಬರಹಗಳನ್ನು ಆಹ್ವಾನಿಸಲಾಗಿದೆ. ಆ ದಿಸೆಯಲ್ಲಿ ಈವರೆಗೆ ಎಲ್ಲಿಯೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಕೊಡವ ಭಾಷೆಯಲ್ಲಿ ರಚಿಸಿದ ಕಥೆ, ಕವನ, ಚುಟುಕ, ವೈಚಾರಿಕ ಲೇಖನ, ನಗೆಹನಿ, ಪ್ರಬಂಧ, ಸಂಶೋಧನಾ ಲೇಖನಗಳನ್ನು ಕಚೇರಿ ಮೊಬೈಲ್ ಸಂಖ್ಯೆ – 8762942976 ಅಥವಾ ಇ-ಮೇಲ್ [email protected] ಗೆ ನುಡಿ ಫಾಂಟ್ ಅಲ್ಲಿ ಟೈಪ್ ಮಾಡಿ ಇಲ್ಲವೆ ಕೈ ಬರಹದಲ್ಲಿ ಅಚ್ಚುಕಟ್ಟಾಗಿ ಬರೆದು 10 ನವೆಂಬರ್ 2025 ರೊಳಗೆ ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿ ಮಡಿಕೇರಿ-571201 ಈ ಕಚೇರಿಗೆ ತಲುಪಿಸಬಹುದು .
ಅರ್ಹವಾದುದ್ದನ್ನು ‘ಕೊಡವೋಲೆ’ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಬರಹಗಾರರು ಬರೆದು ಕಳುಹಿಸುವಾಗ ಹೆಸರು ಮತ್ತು ಪೂರ್ಣ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಬ್ಯಾಂಕ್ ಖಾತೆಯ ವಿವರವುಳ್ಳ ಪಾಸ್‌ಬುಕ್ ಪ್ರತಿಯನ್ನು ನೀಡಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಚೇರಿ ದೂರವಾಣಿ 8762942976ಯನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿ ಅಧಿಕಾರಿಗಳು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಮಂಗಳೂರಿನ ಪುರಭವನದಲ್ಲಿ ‘ಭರತನಾಟ್ಯ ರಂಗಪ್ರವೇಶ’ | ಅಕ್ಟೋಬರ್ 25
Next Article ವಿದ್ಯಾರ್ಥಿ ಕವಿಗೋಷ್ಠಿಗೆ ಆಹ್ವಾನ | ಅಕ್ಟೋಬರ್ 23