ಸುಬ್ರಹ್ಮಣ್ಯ: ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ 16 ನವೆಂಬರ್ 2025ರಂದು ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಈ ಸಂಬಂಧ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಪಂಜ ಹೋಬಳಿಯ ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಕೂತ್ಕುಂಜ, ಮುರುಳ್ಯ, ಐವತೊಡ್ಲು, ಪಂಬೆತ್ತಾಡಿ ಹಾಗೂ ಸುಳ್ಯ ಹೋಬಳಿಯ ಕಲ್ಮಡ್ಕ, ಕಳಂಜ, ಬಾಳಿಲ, ಅಮರ ಮುನ್ನೂರು, ಅಮರ ಪಡೂರು, ನೆಲ್ಲೂರು ಕೆಮ್ರಾಜೆ ಮತ್ತು ಮಡಪ್ಪಾಡಿ ಗ್ರಾಮಗಳ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಹಾಗೂ ಭಾಷೆಗೆ ಸಂಬಂಧಿಸಿದ ಕವನಗಳ ಜೊತೆಗೆ ತಮ್ಮ ಸ್ವ-ಪರಿಚಯವನ್ನು ಕಳುಹಿಸಬಹುದು. ಕವನ ಕಳುಹಿಸಲು ಅಕ್ಟೋಬರ್ 23ಕೊನೆಯ ದಿನ.
ಆಯ್ಕೆಯಾದ ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಇದೆ. ಕವನಗಳನ್ನು ಕಳುಹಿಸುವವರು ಯೋಗೀಶ್ ಹೊಸೊಳಿಕೆ ಅವರ ಮೊಬೈಲ್ ಸಂಖ್ಯೆ 9449576632ಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಬೇಕೆಂದು ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪಂಜ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾಬು ಗೌಡ ಅಚ್ಚಪ್ಪಾಡಿ ತಿಳಿಸಿದ್ದಾರೆ.