ಹೊನ್ನಾವರ : ಶ್ರೀ ಮಹಾಗಣಪತಿ ಟ್ರಸ್ಟ್ (ರಿ.) ಕೈಕಟ್ಗೇರಿ ಸಂಯೋಜನೆಯಲ್ಲಿ ‘ಯಕ್ಷಶ್ರಾವ್ಯ’ ತಾಳಮದ್ದಲೆ ಕಾರ್ಯಕ್ರಮವನ್ನು ದಿನಾಂಕ 25 ಅಕ್ಟೋಬರ್ 2025ರಂದು ಸಂಜೆ 4-30 ಗಂಟೆಗೆ ಹೊನ್ನಾವರ ಸಾಲ್ಕೊಡ್ ಶ್ರೀ ಬೆಣ್ಣೆಗಣಪತಿ ಸಭಾಭವನ ಕೊಡಾರಿಯಲ್ಲಿ ಆಯೋಜಿಸಲಾಗಿದೆ.
‘ಪಟ್ಟಾಭಿಷೇಕ’ ಎಂಬ ಪ್ರಸಂಗದ ಹಿಮ್ಮೇಳದಲ್ಲಿ ಸುಧೀರ್ ಭಟ್ಟ ಪೆರ್ಡೂರು ಭಾಗವತರು, ನಾಗರಾಜ ಭಂಡಾರಿ ಹಿರೇಬೈಲ್ ಮದ್ದಲೆ ಮತ್ತು ನಯನ ಕುಮಾರ ನಿಟ್ಟೂರು ಚಂಡೆಯಲ್ಲಿ ಹಾಗೂ ಮುಮ್ಮೇಳದಲ್ಲಿ ವಿಶ್ವೇಶ್ವರ ಭಟ್ಟ ಸುಣ್ಣಂಬಳ, ವಿದ್ವಾನ್ ಶ್ರೀ ಗಣಪತಿ ಭಟ್ಟ ಸಂಕದಗುಂಡಿ, ಪವನ ಕಿರಣ್ಕೆರೆ ಮತ್ತು ಪ್ರಸಾದ ಭಟ್ಕಳ ಇವರುಗಳು ಸಹಕರಿಸಲಿದ್ದಾರೆ.