ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಯ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 26 ಅಕ್ಟೋಬರ್ 2025ರ ಆದಿತ್ಯವಾರದಂದು ಮಧ್ಯಾಹ್ನ 1-00ಗೆ ಶ್ರೀ ಜಯರಾಮ ದೇವಸ್ಯ ಬಳಗದಿಂದ ಯಕ್ಷಗಾನ ತಾಳಮದ್ದಳೆ, ತದನಂತರ ಸದಸ್ಯ ಸಮಾವೇಶ ಜರಗಲಿದೆ.
ಸಂಜೆ 4-00 ಗಂಟೆಗೆ ನಡೆಯುವ ಸಮಾವೇಶದ ಆಶೀರ್ವಚನ ಮತ್ತು ದೀಪ ಪ್ರಜ್ವಲನೆಯನ್ನು ಒಡಿಯೂರು ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನೆರವೇರಿಸಲಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣಯ್ಯ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯರ ರಂಗಭೂಮಿ ತಜ್ಞರಾದ ಶ್ರೀ ಮೂರ್ತಿ ದೇರಾಜೆ, ವಿದ್ವಾಂಸರು- ತಾಳಮದ್ದಲೆ ಅರ್ಥದಾರಿ-ಪ್ರವಚನಕಾರರದ ಶ್ರೀ ಉಜಿರೆ ಅಶೋಕ ಭಟ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಸತೀಶ ಅಡಪ ಸಂಕಬೈಲು, ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶೀನ ಶೆಟ್ಟಿ ಕಜೆ ಪ್ರತಿಷ್ಠಾನದ ಪ್ರೋತ್ಸಾಹಕರಾದ ಕಾಸರಗೋಡಿನ ಹಿರಿಯ ಕವಿ ಶ್ರೀ ರಾಧಾಕೃಷ್ಣ ಕೆ. ಉಳಿಯತಡ್ಕ ಹಾಗೂ ಶ್ರೀ ವಾಸುದೇವ ಕಾರಂತ ಉಜಿರೆಕೆರೆ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 6-00ಕ್ಕೆ ಪ್ರಪ್ರಥಮ ಬಾರಿಗೆ ‘ಸಾಕೇತ ಕಲಾವಿದರು ಹೆಗ್ಗೋಡು ಸಾಗರ’ ಇವರಿಂದ ‘ಗದಾಯುದ್ಧ’ ಎಂಬ ಬಡಗು ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.