ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಇದರ ವತಿಯಿಂದ 2025ರ ವಿನೂತನ ಕಾರ್ಯಕ್ರಮ ಸರಣಿಯ ಅಕ್ಟೋಬರ್ ತಿಂಗಳ ಕಾರ್ಯಕ್ರಮದಲ್ಲಿ ಕುಂದಾಪುರ ಕುಂದೇಶ್ವರದ ಶ್ರೀ ಏಕನಾಥೇಶ್ವರಿ ಭಜನಾ ಮಂಡಳಿ ಇವರಿಂದ ‘ಭಕ್ತಿ ಗೀತೆಗಳು’ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಯು.ಎಸ್.ಎ.ಯ ಎಸ್.ಎಲ್.ಕೆ. ಆಸ್ಟಿನ್ ಇದರ ಸೀನಿಯರ್ ಮ್ಯಾನೇಜರ್ ಎಮ್. ರಾಜೇಶ್ ರತ್ನಾಕರ ಪೈ ಇವರು ಕೊಡುಗೆ ನೀಡಿದ 55 ಇಂಚಿನ ಟಿ.ಸಿ.ಎಲ್. ಟಿ.ವಿ.ಯ ಉದ್ಘಾಟನೆ ನಡೆಯಲಿದೆ.

