ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ, ಆರ್ಟ್ ಕೆನರಾ ಟ್ರಸ್ಟ್ ಮತ್ತು ಮಂಗಳೂರು ಆರ್ಟ್ ಅರ್ಚಿವಲ್ ಪ್ರಾಜೆಕ್ಟ್ ಇವುಗಳ ಸಹಯೋಗದಲ್ಲಿ ಪುಸ್ತಕ ಬಿಡುಗಡೆ ಮತ್ತು ಪ್ರದರ್ಶನದ ಉದ್ಘಾಟನೆಯನ್ನು ದಿನಾಂಕ 25 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾಜಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಎಂ. ಪ್ರಶಾಂತ್ ಶೇಟ್, ಜಯಂತ್ ಕೋಡ್ಕಣಿ ಮತ್ತು ಸುಭಾಸ್ ಚಂದ್ರ ಬಸು ಇವರುಗಳು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಅಂಪೈರ್ ಕಸ್ತೂರಿ ಬಾಲಕೃಷ್ಣ ಪೈ ಇವರನ್ನು ಸನ್ಮಾನಿಸಲಾಗುವುದು. ದಿನಾಂಕ 01 ನವೆಂಬರ್ 2025ರ ತನಕ ಬೆಳಗ್ಗೆ 11-00 ಗಂಟೆಯಿಂದ ಸಂಜೆ 7-00 ಗಂಟೆ ತನಕ ಪ್ರದರ್ಶನವು ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೇಮಿರಾಜ ಶೆಟ್ಟಿ 99863 66355 ಮತ್ತು ರಾಜೇಂದ್ರ ಕೇದಿಗೆ 94800 14812 ಇವರನ್ನು ಸಂಪರ್ಕಿಸಿರಿ.

