ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯ ವತಿಯಿಂದ ಬಿ.ಸಿ. ರಾಮಚಂದ್ರ ಶರ್ಮ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 26 ಅಕ್ಟೋಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಖ್ಯಾತ ವಿಮರ್ಶಕರಾದ ವಿಕಾಸ ಹೊಸಮನಿ ಇವರ ಅಧ್ಯಕ್ಷತೆ ನಡೆಯುವ ಈ ಸಮಾರಂಭದಲ್ಲಿ ಖ್ಯಾತ ಸಾಹಿತಿಗಳಾದ ಪ್ರೊ. ರಾಘವೇಂದ್ರ ಪಾಟೀಲ ಇವರು ಪ್ರಶಸ್ತಿ ಪ್ರದಾನ ಮತ್ತು ಪ್ರಶಸ್ತಿ ವಿಜೇತ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ. ಪ್ರಶಸ್ತಿ ವಿಜೇತ ಉದಯೋನ್ಮುಖ ಲೇಖಕರಾದ ಹಾವೇರಿಯ ಲಿಂಗರಾಜ ಸೊಟ್ಟಪ್ಪನವರ ಮತ್ತು ದಾವಣಗೆರೆಯ ರೇವಣಸಿದ್ಧಪ್ಪ ಜಿ.ಆರ್. ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.