ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ ದ. ಕ. ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ ಪುತ್ತೂರು ತಾಲೂಕು ಘಟಕ, ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ದ. ಕ. ಜಿಲ್ಲಾ 10ನೇ ಗಮಕ ಸಮ್ಮೇಳನ ದಿನಾಂಕ 17 ಅಕ್ಟೋಬರ್ 2025ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಒಡಿಯೂರು ಸಂಸ್ಥಾನದ ಯೋಗಿನಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಮಾತನಾಡಿ “ಗಮಕ ಕಲೆಗೆ ಪ್ರಚಾರ ಸಿಗಬೇಕು. ಜಿಲ್ಲಾ ಅಧ್ಯಕ್ಷರು ಹೇಳಿದ ಹಾಗೆ ಮಠ ಮಂದಿರಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಪುರಾಣ ವಾಚನಗಳು ನಡೆಯಬೇಕು. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಗಮಕಲಾ ಪರಿಷತ್ತು ಇದರ ಅಧ್ಯಕ್ಷರಾದ ಪ್ರೊಫೆಸರ್ ಮಧೂರು ಮೋಹನ ಕಲ್ಲೂ ರಾಯ ಮಾತನಾಡಿ “ಕನ್ನಡ ಕಾವ್ಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಗಮಕ ಅಥವಾ ಕಾವ್ಯವಾಚನವು ಮಹತ್ತಾದಂತಹ ಕೆಲಸವನ್ನು ಮಾಡುತ್ತಿದೆ. ಗಮಕ ಎಂಬ ಶಬ್ದವು ಪುರಾಣ ಕಾಲದಲ್ಲಿ ಇತ್ತು ರಾಜರ ವುಡ್ಡೋಲಗ ಶೋಭಿಸಬೇಕು ಎಂದಾದರೆ ಕವಿ ಗಮಕಿ ವಾದಿ ವಾಗ್ಮಿ ಎಂಬಂತಹ ನಾಲ್ಕು ಪಂಡಿತರ ಆ ಸಭೆಯಲ್ಲಿ ಶೋಭಿಸಬೇಕಿತ್ತು ಹಾಗಾಗಿ ಗಮಕ್ಕಕ್ಕೆ ಪುರಾಣಕಾಲದಿಂದಲೇ ವಿಶೇಷವಾದಂತಹ ಸ್ಥಾನಮಾನ ಇತ್ತು. ಲವಕುಶರು ಮೊದಲ ಗಮಕಿಗಳು. ಆ ಗಮಕವನ್ನ ಹೇಳಿಕೊಟ್ಟವರು ಶ್ರೀಮದ್ ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿ. ಮೊದಲ ಗಮಕ ವಾಚನವು ರಾಮಾಯಣ ಕಾವ್ಯದ ವಾಚನವು ಶ್ರೀರಾಮನ ಸಭೆಯಲ್ಲಿ ನಡೆಯಿತು” ಎಂದರು.
