ಉಪ್ಪಿನಂಗಡಿ : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಉಪ್ಪಿನಂಗಡಿ ಹೋಬಳಿ ಘಟಕ ಇದರ ವತಿಯಿಂದ ವಿದ್ಯಾರ್ಥಿಗಳಲ್ಲಿ ಕನ್ನಡದ ಹೆಸರಾಂತ ಕವಿಗಳ ಬಗ್ಗೆ ಆಸಕ್ತಿ ಮತ್ತು ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ ‘ಕನ್ನಡ ಕಲರವ -3’ ಹಾಗೂ ಕನ್ನಡ ರಾಜ್ಯೋತ್ಸವವನ್ನು ದಿನಾಂಕ 01 ನವೆಂಬರ್ 2025ರಂದು ಮಧ್ಯಾಹ್ನ 1-30 ಗಂಟೆಗೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಇಂದ್ರಪ್ರಭ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷರಾದ ಕರುಣಾಕರ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ಉದ್ಘಾಟನೆ ಮಾಡಲಿದ್ದಾರೆ.
‘ಜಿ.ಪಿ. ರಾಜರತ್ನಂ’ ಇವರ ಬಗ್ಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ, ‘ದ.ರಾ.ಬೇಂದ್ರೆ’ ಇವರ ಬಗ್ಗೆ ಇಂದ್ರಪ್ರಸ್ಥ ಸಮೂಹ ವಿದ್ಯಾ ಸಂಸ್ಥೆ ಉಪ್ಪಿನಂಗಡಿ, ‘ಸಂತ ಶಿಶುನಾಳ ಶರೀಫ’ ಇವರ ಬಗ್ಗೆ ಶ್ರೀರಾಮ ಶಾಲೆ ವೇದಶಂಕರ ನಗರ, ‘ಕೆ.ಎಸ್. ನರಸಿಂಹ ಸ್ವಾಮಿ’ ಇವರ ಬಗ್ಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ, ‘ಕುವೆಂಪು’ ಇವರ ಬಗ್ಗೆ ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ, ‘ನಿಸಾರ್ ಅಹಮದ್’ ಇವರ ಬಗ್ಗೆ ಸೈಂಟ್ ಮೇರೀಸ್ ಸ್ಕೂಲ್ ಉಪ್ಪಿನಂಗಡಿ, ‘ಜಿ.ಎಸ್. ಶಿವರುದ್ರಪ್ಪ’ ಇವರ ಬಗ್ಗೆ ಅರಫಾ ಆಂಗ್ಲ ಮಾದ್ಯಮ ವಿದ್ಯಾ ಸಂಸ್ಥೆ ಉಪ್ಪಿನಂಗಡಿ, ‘ಪು.ತಿ. ನರಸಿಂಹಾಚಾರ್ಯ’ ಇವರ ಬಗ್ಗೆ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ, ‘ಡಿವಿಜಿ’ ಇವರ ಬಗ್ಗೆ ಶಾಂತಿನಗರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಮಾಹಿತಿ ನೀಡಲಿದ್ದಾರೆ.

