ನೀಲ್ಕೋಡ್ : ಅಭಿನೇತ್ರಿ ಆರ್ಟ್ ಟ್ರಸ್ಟ್ (ರಿ.) ನೀಲ್ಕೋಡ್ ಅರ್ಪಿಸುವ ‘ಅಭಿನೇತ್ರಿ ಯಕ್ಷೋತ್ಸವ 2025’ ದಿ. ಎಮ್. ಜಿ. ಹೆಗಡೆ ಇಡಗುಂಜಿ ವೇದಿಕೆಯಲ್ಲಿ ದಿನಾಂಕ 01 ಮತ್ತು 02 ನವೆಂಬರ್ 2025ರಂದು ಸಂಜೆ 4-00 ಗಂಟೆಗೆ ಗೋಗ್ರೀನ್ ಇಲ್ಲಿ ಆಯೋಜಿಸಲಾಗಿದೆ.
ದಿನಾಂಕ 01 ನವೆಂಬರ್ 2025ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಕೃಷ್ಣ ಯಾಜಿ ಬಳ್ಕೂರು ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಅಭಿನೇತ್ರಿ ವಿದ್ಯಾರ್ಥಿಗಳಿಂದ ‘ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಜಾಂಬವತಿ ಕಲ್ಯಾಣ’ ಮತ್ತು ಪ್ರಸಿದ್ಧ ಕಲಾವಿದರಿಂದ ಗುಂಡು ಸೀತಾರಾಮ ರಾವ್ ವಿರಚಿತ ‘ಯಕ್ಷಲೋಕ ವಿಜಯ’ ಯಕ್ಷಗಾನ ನಡೆಯಲಿದೆ. ಹಿರಿಯ ಸ್ತ್ರೀವೇಷಧಾರಿಯಾದ ಮಾಧವ ಪಟಗಾರ ಹೆಗಡೆ ಇವರಿಗೆ ‘ಅಭಿನೇತ್ರಿ ಪ್ರಶಸ್ತಿ’, ಯಕ್ಷಗಾನದ ಹಿರಿಯ ವೇಷಧಾರಿಯಾದ ಭಾಸ್ಕರ ಬಿಲ್ಲವ ತುಂಬ್ರಿ ಇವರಿಗೆ ‘ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿ’ ಮತ್ತು ವಿದ್ಯಾಧರ ರಾವ್ ಜಲವಳ್ಳಿ ಇವರಿಗೆ ‘ಕಣ್ಣಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ದಿನಾಂಕ 02 ನವೆಂಬರ್ 2025ರಂದು ಪ್ರಸಿದ್ಧ ಕಲಾವಿದರಿಂದ ಮಧುಕುಮಾರ ಬೋಳೂರು ವಿರಚಿತ ‘ಸುದರ್ಶನ ವಿಜಯ’ ಮತ್ತು ಅಜಪುರ ವಿಷ್ಣು ವಿರಚಿತ ‘ಕೀಚಕ ವಧೆ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ವೇದಮೂರ್ತಿ ಸುಬ್ರಹ್ಮಣ್ಯ ಭಟ್ಟ ಇವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ವಿದುಷಿ ವಸಂತಲಕ್ಷ್ಮೀ ಹೆಗಡೆ ಇವರ ಶಿಷ್ಯರಿಂದ ಭರತನಾಟ್ಯ ಪ್ರಸ್ತುತಗೊಳ್ಳಲಿದೆ.

