ಮಂಗಳೂರು : ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಹಿರಿಯ ಲೇಖಕಿ ಲಲಿತಾ ರೈ ಮತ್ತು ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ಶ್ರದ್ದಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ದಿನಾಂಕ 27 ಅಕ್ಟೋಬರ್ 2025ರ ಶನಿವಾರದಂದು ಮಂಗಳೂರಿನ ತುಳುಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಗಲಿದ ದಿವ್ಯ ಚೇತನಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ “ತುಳು ಭಾಷಿಗರು ಕನ್ನಡ ಕೃತಿಗಳನ್ನು ಬರೆದಾಗ ಕೃತಿಯಂತೂ ಕನ್ನಡದ್ದು ಆಗಿದ್ದರೂ ಕೃತಿಯೊಳಗಡೆ ತುಳುವಿನ ಸತ್ವಗಳೇ ತುಂಬಿರುತ್ತದೆ. ಲಲಿತಾ ರೈ ಅವರ ಎಲ್ಲಾ ಕೃತಿಗಳಲ್ಲಿ ತುಳುವಿನ ನೈಜ ಸತ್ವ ಹಾಗೂ ವೈಚಾರಿಕ ನಿಲುವು ಇತ್ತು. ತುಳುವಿನ ಮೇಲಿನ ಪ್ರೀತಿ, ಅಭಿಮಾನ ಹಾಗೂ ತುಳು ಭಾಷೆಯ ಅಭಿವೃದ್ಧಿಯಲ್ಲಿ ಯಕ್ಷಗಾನದ ಮೂಲಕ ದಿನೇಶ್ ಅಮ್ಮಣ್ಣಾಯರ ಕೊಡುಗೆ ಅಪಾರವಿದ್ದು, ಅವರ ತುಳು ಹಾಡುಗಳ ವೈಶಿಷ್ಟ್ಯಗಳು ಕೃತಿಯ ರೂಪದಲ್ಲಿ ಹೊರತರುವ ಕೆಲಸವಾಗಬೇಕು” ಎಂದು ಹೇಳಿದರು.
ಹಿರಿಯ ಲೇಖಕಿ ಬಿ. ಎಂ. ರೋಹಿಣಿ ಮಾತನಾಡಿ “ಲಲಿತಾ ರೈ ಅವರು ಬಡ ಮಕ್ಕಳ ವಿದ್ಯಾಭ್ಯಾಸ, ಅನಾರೋಗ್ಯ ಪೀಡಿತರಿಗೆ ನೆರವು ಸೇರಿದಂತೆ ಹತ್ತಾರು ವಿಚಾರದಲ್ಲಿ ಉದಾರ ದಾನವನ್ನು ನೀಡಿ ನೆರವಾಗುತ್ತಿದ್ದರು” ಎಂದರು.
ಲೇಖಕಿ ಡಾ. ಜ್ಯೋತಿ ಚೇಳ್ಯಾರು, ಲಲಿತಾ ರೈ ಅವರ ಪುತ್ರ ಡಾ.ಜಿತೇಂದ್ರ ರೈ, ಭಾಸ್ಕರ ರೈ ಕುಕ್ಕುವಳ್ಳಿ, ಸುಬ್ರಹ್ಮಣ್ಯ ಬೈಪಡಿತ್ತಾಯ ಮಾತನಾಡಿದರು.
ಲಲಿತಾ ರೈ ಅವರ ಪುತ್ರಿ ಕೃಪಾ ರೈ, ಅಳಿಯ ಆನಂದ ಶೆಟ್ಟಿ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ತುಳು ಪರಿಷತ್ ಇದರ ಅಧ್ಯಕ್ಷರಾದ ಶುಭೋದಯ ಆಳ್ವ, ಡಾ. ಮೀನಾಕ್ಷಿ ರಾಮಚಂದ್ರ ಸೇರಿದಂತೆ ಲೇಖಕರು, ಕಲಾವಿದರು ನುಡಿನಮನ ಸಲ್ಲಿಸಿದರು. ನುಡಿ ನಮನ ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನಡೆಸಿಕೊಟ್ಟರು.
Subscribe to Updates
Get the latest creative news from FooBar about art, design and business.
Previous Articleಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಕವಿಗೋಷ್ಠಿ
