ಯಡಾಡಿ, ಮತ್ಯಾಡಿ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಆಯೋಜಿಸಿದ ಪ್ರಸಂಗ- ಪ್ರಯೋಗ – ಪ್ರಾತ್ಯಕ್ಷಿಕೆ’ ಕಾರ್ಯಕ್ರಮವು 25 ಅಕ್ಟೋಬರ್ 2025ರಂದು ಮೊರಾರ್ಜಿ ದೇಸಾಯಿ ರೆಸಿಡೆನ್ಷಿಯಲ್ ಸ್ಕೂಲ್ ಯಡಾಡಿ, ಮತ್ಯಾಡಿ ಇಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ದೀವಟಿಕೆ ಬೆಳಗುವ ಮೂಲಕ ಚಾಲನೆ ನೀಡಿದ ಮೊರಾರ್ಜಿ ದೇಸಾಯಿ ರೆಸಿಡೆನ್ಷಿಯಲ್ ಸ್ಕೂಲಿನ ಪ್ರಾಂಶುಪಾಲರಾದ ಶ್ರೀಮತಿ ಶೈಲಾ ಎಮ್. ಶೇಟ್ ಮಾತನಾಡಿ “ಸರಕಾರಿ ವ್ಯವಸ್ಥೆಯ ವಸತಿ ನೆಲೆಯಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಯಕ್ಷಗಾನದ ಮೂಲ ಸ್ವರೂಪವನ್ನು ಬಿತ್ತರಿಸುವ ಕಾರ್ಯ ಅತ್ಯಮೂಲ್ಯವಾದದ್ದು. ದಿನವಿಡೀ ಓದು ಹಾಗೂ ಇನ್ನಿತರ ಚಟುವಟಿಕೆಯಲ್ಲಿ ನಿರತರಾದ ಮಕ್ಕಳಿಗೆ ಮಕ್ಕಳಿಂದಲೇ ಯಕ್ಷಗಾನದ ಪರಂಪರೆಯನ್ನು ತಿಳಿಸುವ ಪ್ರಯತ್ನ ಯಶಸ್ಸು ಪಡೆಯುತ್ತದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಯತ್ನ ಮಾನಿತವಾದದ್ದು. ಇಂತಹ ಮಾನಿತವಾದ ಸದ್ಗುಣವನ್ನು ಸರ್ವರೂ ಬೆಳೆಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಮಾತನಾಡಿ “ರಂಗದಲ್ಲಿ ಕಳೆದು ಹೋದ ಯಕ್ಷಗಾನದ ಯುದ್ಧ ಕುಣಿತ, ಪ್ರಯಾಣ ಕುಣಿತ, ಕಿರಾತನ ಒಡ್ಡೋಲಗವನ್ನು ಬಳಸಿಕೊಂಡು ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುವ ಬಗೆಯನ್ನು ಯಶಸ್ವೀ ಕಲಾವೃಂದ ಮಾಡುತ್ತಿದೆ. ಈ ಶಾಸ್ತ್ರೀಯ ಕಲೆಯನ್ನು ಕಲಿತ ಮಕ್ಕಳು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗುತ್ತದೆ. ಇಂತಹ ಹಲವು ಪ್ರಕಾರವನ್ನು ಉಳಿಸುವ ಕಾರ್ಯದಲ್ಲಿ ನಿರಂತರತೆಯನ್ನು ಸಾಧಿಸಿದೆ” ಎಂದರು.
ಯಲ್ಲಾಪುರದ ಗಣಪತಿ ಭಟ್, ಸುಬ್ರಹ್ಮಣ್ಯ ವೈದ್ಯ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ವಿದ್ಯಾರ್ಥಿ ಹರೀಶ್ ಕಾವಡಿ, ರಂಗ ನಿರ್ದೇಶಕ ಶ್ರೀಶ ಭಟ್ ತೆಕ್ಕಟ್ಟೆ ಉಪಸ್ಥಿತರಿದ್ದರು. ಬಳಿಕ ಯಶಸ್ವೀ ಕಲಾವೃಂದದ ಮಕ್ಕಳಿಂದ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ರಂಗಪ್ರಸ್ತುತಿಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಅನುಪಲ್ಲವಿಯಲ್ಲಿ ದೀಪಾವಳಿ ವಿಶೇಷ ಉದಯ ರಾಗ
