ಮಂಗಳೂರು : ಸುರತ್ಕಲ್‌ನ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ 2024-25ನೇ ಸಾಲಿನ ಪ್ರಶಸ್ತಿಗೆ ಐವರು ಆಯ್ಕೆಯಾಗಿದ್ದಾರೆ. ಆತ್ರೇಯಿ ಕೃಷ್ಣ ಕಾರ್ಕಳ ಇವರು ‘ಯುವ ಕಲಾಮಣಿ’, ದಿವ್ಯಶ್ರೀ ಮಣಿಪಾಲ ಇವರು ‘ಮಣಿ ಮತ್ತು ಎಂ.ಕೆ. ವಾರ್ಷಿಕ ಪ್ರಶಸ್ತಿ’, ವಿದ್ವಾನ್ ವಿಠಲ ರಾಮ ಮೂರ್ತಿ ಇವರು ‘ಲಲಿತ ಕಲಾ ಪೋಷಕ ಮಣಿ ಪ್ರಶಸ್ತಿ’, ಉಮಾ ಉದಯ ಶಂಕರ್ ಪರ್ಕಳ ಇವರು ‘ಎ.ಈಶ್ವರಯ್ಯ ಸ್ಮಾರಕ ಪ್ರಶಸ್ತಿ’, ಜೇನುಮೂಲೆ ಕೃಷ್ಣ ಭಟ್ ಇವರು ‘ಹಿರಿಯ ಸಾಧಕ ಸನ್ಮಾನ’ಕ್ಕೆ ಆಯ್ಕೆಯಾಗಿದ್ದು, ಇವರುಗಳಿಗೆ ದಿನಾಂಕ 13ರಿಂದ 20 ಡಿಸೆಂಬರ್ 2025ರ ತನಕ ನಡೆಯುವ ‘ರಾಗ ಸುಧಾರಸ ಸಂಗೀತೋತ್ಸವ’ ಸಂದರ್ಭ ಪ್ರಶಸ್ತಿ ವಿತರಿಸಲಾಗುವುದು ಎಂದು ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ನಿತ್ಯಾನಂದ ರಾವ್ ತಿಳಿಸಿದ್ದಾರೆ.

