ಮೈಸೂರು : ಸಮುದಾಯ ಮೈಸೂರು ರಂಗೋತ್ಸವವನ್ನು ದಿನಾಂಕ 31 ಅಕ್ಟೋಬರ್, 01 ಮತ್ತು 02 ನವೆಂಬರ್ 2025ರಂದು ಮೈಸೂರು ಕಲಾ ಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಚಿತ್ರಕಲಾ ರಚನಾ ಕಮ್ಮಟ, ರಂಗ ಗೀತೆಗಳು, ಬೀದಿ ನಾಟಕಗಳು, ರಂಗ ಪ್ರಸ್ತುತಿಗಳು, ರಂಗ ಗೌರವ, ವಿಚಾರ ಸಂಕಿರಣಗಳು ನಡೆಯಲಿದೆ.
ದಿನಾಂಕ 31 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಮನುಷ್ಯತ್ವದೆಡೆಗೆ ಸಮುದಾಯ ಕಲಾ ಶಿಬಿರದ ಉದ್ಘಾಟನೆಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಎಮ್.ಎಸ್. ಮೂರ್ತಿ ಇವರು ನೆರವೇರಿಸಲಿದ್ದಾರೆ. ಸಂಜೆ 5-00 ಗಂಟೆಗೆ ದೇವಾನಂದ ವರಪ್ರಸಾದ್ ಮತ್ತು ತಂಡದವರಿಂದ ಜನಪದ – ಜನಪರ ಗೀತ ಗಾಯನ ಪ್ರಸ್ತುತಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಕೆ. ಮರುಳಸಿದ್ಧಪ್ಪ ಇವರು ಉದ್ಘಾಟನೆ ಮಾಡಲಿದ್ದು, ಹೆಚ್. ಜನಾರ್ದನ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ರಾಮೇಶ್ವರಿ ವರ್ಮ, ಅಬ್ದುಲ್ ರೆಹಮಾನ್ ಪಾಷ, ರವೀಶ್ ಮತ್ತು ಪ್ರಕಾಶ್ ಶೆಣೈ ಇವರಿಗೆ ರಂಗ ಗೌರವ, ಮೈಮ್ ರಮೇಶ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ಜಿ.ಪಿ.ಐ.ಇ.ಆರ್. ರಂಗತಂಡ ‘ವರ್ಡ್ ನಂ 6’ ನಾಟಕ ಪ್ರಸ್ತುತ ಪಡಿಸಲಿದ್ದಾರೆ.
ದಿನಾಂಕ 01 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ಮೈಸೂರು ಹವ್ಯಾಸಿ ರಂಗ ವೇದಿಕೆಯ ಕಲಾವಿದರಿಂದ ಜನಪರ ಗೀತ ಗಾಯನ, ರಮೇಶ್ ದನ್ನೂರು, ಪುರುಷೋತ್ತಮ ಕಿರಗಸೂರು, ಸಿದ್ದೇಶ್ ಬದನವಾಳು ಮತ್ತು ಪ್ರದೀಪ್ ಇವರಿಂದ ವಾದ್ಯ ಗೋಷ್ಠಿ, ಕ್ರಿಯಾ ಮಾಧ್ಯಮ ಹೊರ ತಂದಿರುವ ‘ನಿರಂಜನ ಮರು ಓದು’ ಸರಣಿಯ ನಾಲ್ಕು ಪುಸ್ತಕಗಳ ಬಿಡುಗಡೆ ಹಾಗೂ ಚ. ಸರ್ಮಮಂಗಳ, ಓ.ಎಲ್. ನಾಗಭೂಷಣ ಸ್ವಾಮಿ, ಅಕ್ಮಲ್ ಪಾಷ ಮತ್ತು ಪ್ರೊ. ಕೆ.ಪಿ. ವಾಸುದೇವನ್ ಇವರಿಗೆ ರಂಗ ಗೌರವ, ಸವಿತಾ ರಾಣಿ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ರಂಗಾಯಣ ಮೈಸೂರು ಪಸ್ತುತ ಪಡಿಸುವ ಬಾನು ಮುಷ್ತಾಕ್ ಕತೆಗಳ ಆಧಾರಿತ ‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 02 ನವೆಂಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ‘ಕನ್ನಡ ರಂಗಭೂಮಿ – ಜನಪರ ಸಂಸ್ಕೃತಿ ಆಶಯಗಳು’ ವಿಚಾರ ಸಂಕಿರಣದ ಉದ್ಘಾಟನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ. ಗುರುರಾಜ್ ಮಾಡಲಿದ್ದಾರೆ. ‘ರಂಗಭೂಮಿಯಲ್ಲಿ ವಿಜ್ಞಾನ ಸಂವಹನ’ ಎಂಬ ವಿಷಯದ ಬಗ್ಗೆ ಡಾ. ಸಬ್ಯಸಾಚಿ ಚಟರ್ಜಿ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಠಿ 1ರಲ್ಲಿ ಪ್ರೊ. ಓ.ಎಲ್. ನಾಗಭೂಷಣ ಇವರು ‘ಸಮಕಾಲೀನ ಸಾಂಸ್ಕೃತಿಕ ಎಚ್ಚರ’, ಪ್ರೊ. ಹೆಚ್.ಎಸ್. ಉಮೇಶ್ ಇವರು ‘ರಂಗಭೂಮಿಯಲ್ಲಿ ಸಾಂಸ್ಕೃತಿಕ ಎಚ್ಚರ’ ಹಾಗೂ ಗೋಷ್ಠಿ 2ರಲ್ಲಿ ಕುಮಾರಿ ರಾಜಲಕ್ಷ್ಮಿ ಎಂ. ಮೂರ್ತಿ ಇವರು ‘ಜನಪ್ರಿಯ ಸಂಸ್ಕೃತಿ – ರಂಗಭೂಮಿ’, ಕೆ.ಎಂ. ಚೈತನ್ಯ ಇವರು ‘ಜನಪ್ರಿಯ ಸಂಸ್ಕೃತಿ –ಸಮೂಹ ಮಾಧ್ಯಮ’ ಟಿ. ಗುರುರಾಜ್ ಇವರು ‘ಜನಪ್ರಿಯ ಸಂಸ್ಕೃತಿ – ಮಾಧ್ಯಮ’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ 5-00 ಗಂಟೆಗೆ ಮಹಾಲಿಂಗು, ಅಮ್ಮ ರಾಮಚಂದ್ರ, ಸೂರ್ಯಪ್ರಭ ಜೆ., ಭವತಾರುಣಿ, ರಮೇಶ್ ತಾಯೂರು ಇವರಿಂದ ಜನಾಶಯ ಗೀತ ಗಾಯನ, 6-00 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಎಸ್.ಎಸ್. ರಮೇಶ್, ಶಿವಾಜಿ ರಾವ್ ಜಾದವ್ ಮತ್ತು ನಂದಾ ಹಳೆಮನೆ ಇವರಿಗೆ ರಂಗ ಗೌರವ, ಕೆ.ಆರ್. ಸುಮತಿ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ಮೈಸೂರು ಜನಮನ ಸಾಂಸ್ಕೃತಿಕ ಸಂಘಟನೆ ಪ್ರಸ್ತುತ ಪಡಿಸುವ ‘ಕಲ್ಲು ಕರಗುವ ಸಮಯ’ ನಾಟಕ ಪ್ರದರ್ಶನಗೊಳ್ಳಲಿದೆ.

