ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ಪಂಚಮ ವಾರ್ಷಿಕೋತ್ಸವದ ಅಂಗವಾಗಿ ಒಂದು ದಿನದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವವನ್ನು ಮೇ 7ರಂದು ಬೆಳಿಗ್ಗೆ 9.30ಕ್ಕೆ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಧಾರವಾಡದ ಕುಮಾರ್ ಮರಡೂರ್ ಅವರಿಂದ ಹಿಂದುಸ್ತಾನಿ ಗಾಯನ ಕಛೇರಿ ನಡೆಯಲಿದೆ. ಪಂ. ಕೈವಲ್ಯ ಕುಮಾರ್ ಗುರವ್ ರ ಶಿಷ್ಯ ಯುವಕ ಕಲಾವಿದರಾದ ಔರಂಗಾಬಾದ್ ನ ವಿಶಾಲ್ ಭಗವಾನ್ ರಾವ್ ಮಹರಗುಡೆ, ಸಿದ್ಧಾಪುರದ ಮೇಧಾ ಭಟ್, ಪಂ. ಗಣಪತಿ ಭಟ್ ಹಾಸಣಗಿರವರ ಶಿಷ್ಯ ಅಮಿತ್ ಕುಮಾರ್ ಬೆಂಗ್ರೆ ಅವರೂ ಸಹ ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ. ಹಾರ್ಮೋನಿಯಂನಲ್ಲಿ ಶಶಿಕಿರಣ್ ಮಣಿಪಾಲ ಮತ್ತು ಪ್ರಸಾದ್ ಕಾಮತ್ ಮತ್ತು ತಬಲಾದಲ್ಲಿ ಧಾರವಾಡದ ಶ್ರೀಧರ್ ಮಾಂಡ್ರೆ, ವಿಘ್ನೇಶ್ ಕಾಮತ್ ಸಹಕರಿಸಲಿದ್ದಾರೆ. ಅಕಾಡೆಮಿಯ ವಿದ್ಯಾರ್ಥಿಗಳಿಂದ ಲಘು ಶಾಸ್ತ್ರೀಯ ಸಂಗೀತ ವೈವಿಧ್ಯ ನಡೆಯಲಿದೆ.
ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ದೀಪ ಬೆಳಗಿಸುವರು. ಟ್ರಸ್ಟಿನ ಲೋಲಾಕ್ಷಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎ.ಜೆ. ಆಸ್ಪತ್ರೆ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಹಿಂದೂಸ್ತಾನಿ ಗಾಯಕ ಪಂ. ರವಿಕಿರಣ್ ಮಣಿಪಾಲ ಮತ್ತು ಎಂ.ಆರ್.ಪಿ.ಎಲ್. ನ ಜನರಲ್ ಮ್ಯಾನೇಜರ್ ಮಂಜುನಾಥ್ ಎಚ್.ವಿ. ಭಾಗವಹಿಸಲಿದ್ದಾರೆ.