ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ ಧಾರವಾಡ ಇವರ ವತಿಯಿಂದ ‘ಕಾರ್ತೀಕ ದೀಪ’ ನೂತನ ಪದಾಧಿಕಾರಿಗಳ ಪ್ರಥಮ ಕಾರ್ಯಕ್ರಮವು ದಿನಾಂಕ 26 ಅಕ್ಟೋಬರ್ 2025ರಂದು ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು.
ಹುಬ್ಬಳ್ಳಿ ಧಾರವಾಡದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ರೂಪಾ ಜೋಶಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ. ಸ್ನೇಹಾ ಭೂಸನೂರು ಇವರು ನಿರ್ವಹಿಸಿದರು. ಸಂಘದ ಸದಸ್ಯೆಯರಿಂದ ದೀಪಗಳ ಕುರಿತಾದ ಭಾವಗೀತೆಗಳ ಗಾಯನ ಪ್ರಸ್ತುತಗೊಂಡಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಶ್ರೀಮತಿ ಸಂಕಮ್ಮಾ ಸಂಕಣ್ಣವರ್, ಸಾಮಾಜಿಕ ಕ್ಷೇತ್ರದ ಶ್ರೀಮತಿ ಶಾರದಾ ದಾಬಡೆ ಮತ್ತು ರಂಗಭೂಮಿ ಕ್ಷೇತ್ರದ ಶ್ರೀಮತಿ ಕ್ಷಮಾ ಹೊಸಕೇರಿ ಇವರುಗಳನ್ನು ಲೂಸಿ ಸಾಲ್ಡಾನಾ ಅವರ ದತ್ತಿ ಕಾರ್ಯಕ್ರಮದ ಪ್ರಯುಕ್ತ ಸನ್ಮಾನಿಸಲಾಯಿತು.

