ವಗ್ಗ : ಯಕ್ಷಾವಾಸ್ಯಮ್ ಕಾರಿಂಜ (ರಿ.) ಸಂಸ್ಥೆಯ ‘ಪಂಚಮ ವಾರ್ಷಿಕೋತ್ಸವ’ವನ್ನು ದಿನಾಂಕ 01 ನವೆಂಬರ್ 2025ರಂದು ಪೂರ್ವಾಹ್ನ 10-00 ಗಂಟೆಗೆ ವಗ್ಗ ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ ಜೈನ್ ಇವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವರಾದ ಬಿ. ರಾಮನಾಥ ರೈ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಮಂಜಪ್ಪ ನಾಯ್ಕ, ಶ್ರೀಮತಿ ಬೊಮ್ಮಿ, ಶಾರದಾ ಜಿ. ಬಂಗೇರ, ಲೋಕಯ್ಯ ಗೌಡ ಮತ್ತು ವಾಸುದೇವ ಪ್ರಭು ಇವರಿಗೆ ಯಕ್ಷಾವಾಸ್ಯಮ್ ಗೌರವ ಸಂಮಾನ ಮಾಡಲಾಗುವುದು. ಪೂರ್ವಾಹ್ನ 11-00 ಗಂಟೆಗೆ ಪೂರ್ವರಂಗ ಮತ್ತು ‘ಶ್ರೀಕೃಷ್ಣ ಲೀಲೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಪರಾಹ್ನ 2-30 ಗಂಟೆಗೆ ಮಾನ್ಯ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಪರ್ವದಲ್ಲಿ ರಂಗ ನಾಯಕ ಕುರಿಯ ಗಣಪತಿ ಶಾಸ್ತ್ರಿ ಇವರಿಗೆ ‘ಯಕ್ಷಾವಾಸ್ಯಮ್’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 4-30 ಗಂಟೆಗೆ ಯಕ್ಷಾವಾಸ್ಯಮ್ ವಿದ್ಯಾರ್ಥಿಗಳಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

2020ರ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾದ ಯಕ್ಷಾವಾಸ್ಯಮ್ ಕಾರಿಂಜ (ರಿ.) ಸಂಸ್ಥೆಯು ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳ ತರಗತಿಗಳನ್ನು ಶ್ರೀ ಶಾರದಾಂಬ ಭಜನಾ ಮಂದಿರ ಕಾಡಬೆಟ್ಟು ಮತ್ತು ಶ್ರೀರಾಮ ಮಂದಿರ ರಾಮನಗರ ಬಂಟ್ವಾಳದಲ್ಲಿ ನಡೆಸುತ್ತಾ ಬಂದಿದೆ. ಸುಮಾರು 65ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಭಾಗವತಿಕೆ ಮತ್ತು ನಾಟ್ಯ ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಪ್ರತೀ ವರ್ಷವೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಡೆಸುತ್ತಾ ಅದರ ಜೊತೆಗೆ ‘ಯಕ್ಷಾವಾಸ್ಯಮ್ ಪ್ರಶಸ್ತಿ’ ಹಾಗೂ ವಿದ್ಯಾರ್ಥಿ ಪುರಸ್ಕಾರವನ್ನು ನೀಡುತ್ತಾ ಬರುತ್ತಿದ್ದೇವೆ. ಈ ಹಿಂದಿನ ವರ್ಷಗಳಲ್ಲಿ ಶ್ರೀ ಸೂರ್ಯನಾರಾಯಣ ಭಟ್ ಬೆಳ್ಳಾರೆ, ಶ್ರೀ ಗಣೇಶ ಕೊಲೆಕಾಡಿ, ಶ್ರೀ ಜಯರಾಮ ಆಚಾರ್ಯ ಬಂಟ್ವಾಳ, ಶ್ರೀ ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳು ಹಾಗೂ ಈ ವರ್ಷ ಪಂಚಮ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿಯವರಿಗೆ ಯಕ್ಷಾವಾಸ್ಯಮ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
