ಗದಗ : ಡಾ. ವ್ಹಿ.ಬಿ. ಹಿರೇಮಠರ ಮಹಾವೇದಿಕೆ, ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ (ರಿ.) ಗದಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಹಾಗೂ ಅಶ್ವಿನಿ ಪ್ರಕಾಶನ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ‘ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಹಾಗೂ ಕೃತಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 02 ನವೆಂಬರ್ 2025ರಂದು ಮುಂಜಾನೆ 10-00 ಗಂಟೆಗೆ ಗದಗ ಜಿಲ್ಲಾ ಕ್ರೀಡಾಂಗಣದ ಹತ್ತಿರ ಕೆ.ಎಸ್.ಎಸ್. ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
70ನೇ ಕನ್ನಡ ರಾಜ್ಯೋತ್ಸವ, ಅಶ್ವಿನಿ ಪ್ರಕಾಶನದ 4ನೇ ಸಾಹಿತ್ಯ ಸಮ್ಮೇಳನ ಹಾಗೂ ಕೃತಿಗಳ ಬಿಡುಗಡೆ, ಡಾ. ವ್ಹಿ.ಬಿ. ಹಿರೇಮಠರ ಸದ್ಭಾವನಾ ಪ್ರಶಸ್ತಿ, ಅಧ್ಯಾತ್ಮಿಕ ಪೋಷಕ ರತ್ನ ಪ್ರಶಸ್ತಿ, ವಿವೇಕ ಚಿಂತಾಮಣಿ ಸಾಹಿತ್ಯ ರತ್ನ ಪ್ರಶಸ್ತಿ, ಶ್ರೀ ಗುರು ಪಂಚಾಕ್ಷರಿ ಗವಾಯಿಗಳವರ ಸಂಗೀತ ರತ್ನ ಪ್ರಶಸ್ತಿ, ಶ್ರೀ ಗುರು ಹಾನಗಲ್ ಗುರುಕುಮಾರೇಶ ಪ್ರಶಸ್ತಿ, ರಾಷ್ಟ್ರ ನಿರ್ಮಾತೃ ಶಿಕ್ಷಕ ರತ್ನ ಪ್ರಶಸ್ತಿ, ಡಾ. ಶ್ರೀ ತೋಂಟದಾರ್ಯ ಸಿದ್ದಲಿಂಗ ಮಹಾಮಹಿಮಾ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರ ಕವಚ ಧೀರ ಯೋಧಶ್ರೀ ಪ್ರಶಸ್ತಿ, ಆದರ್ಶ ದಂಪತಿ ಪ್ರಶಸ್ತಿ, ಸಂತ ಶ್ರೀ ಕನಕದಾಸರ ಕಾವ್ಯ ರತ್ನ ಪ್ರಶಸ್ತಿಗಳ ಪ್ರದಾನ ನಡೆಯಲಿದೆ.
ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಶ್ರೀಮತಿ ಡಾ. ವ್ಹಿ.ವ್ಹಿ. ಹಿರೇಮಠ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭವನ್ನು ಕನಕದಾಸ ಶಿಕ್ಷಣ ಸಮಿತಿಯ ಚೇರಮೆನ್ ರವೀಂದ್ರನಾಥ ಬಿ. ದಂಡಿನ ಇವರು ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಶ್ರೀಮತಿ ಶೋಭಾ ಬಸವರಾಜ ಮೇಟಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ ಡಾ. ವ್ಹಿ.ವ್ಹಿ. ಹಿರೇಮಠ ಇವರು ರಚಿಸಿರುವ ‘ಅಕ್ಷರದಾಸೋಹಿ’ ಗ್ರಂಥ ಮತ್ತು ‘ಮೇಘ ಸಂದೇಶ’ ಚುಟುಕು ಕವನ ಸಂಕಲನ ಬಿಡುಗಡೆಗೊಳ್ಳಲಿದ್ದು, ಕೆ.ಎಚ್. ಬೇಲೂರ ಮತ್ತು ಡಾ. ರಶ್ಮೀ ಅಂಗಡಿ ಇವರು ಕೃತಿ ಪರಿಚಯ ಮಾಡಲಿದ್ದಾರೆ.

