ಮುಂಬೈ : ಅರುಣೋದಯ ಕಲಾ ನಿಕೇತನ್ ಪ್ರಸ್ತುತ ಪಡಿಸುವ ‘ಸುವರ್ಣ ಮಹೋತ್ಸವಂ’ ಸಂಗೀತ ಮತ್ತು ನೃತ್ಯೋತ್ಸವವನ್ನು ದಿನಾಂಕ 02 ನವೆಂಬರ್ 2025ರಂದು ಸಂಜೆ 3-00 ಗಂಟೆಗೆ ಮಹಾರಾಷ್ಟ್ರ ಮುಂಬೈಯ ವೀರ ಸಾವರ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಗುರು ಎಂ.ಎನ್. ಸುವರ್ಣ ಇವರ ಆಶೀರ್ವಾದದೊಂದಿಗೆ ನಡೆಯುವ ಸುವರ್ಣ ನೃತ್ಯೋತ್ಸವದಲ್ಲಿ ಮುಂಬೈಯ ತ್ಯಾಗೇಶ ಅಕಾಡೆಮಿಯ ಗುರು ದಕ್ಷಿಣಮೂರ್ತಿ, ಸ್ವರಾತ್ಮಿಕ ಸಂಗೀತ ಶಾಲೆಯ ಗುರು ವಿಷ್ಣುದಾಸ್ ಎನ್. ಮತ್ತು ಶ್ರೀ ಷಣ್ಮುಖಾನಂದ ಸಂಗೀತ ವಿದ್ಯಾಲಯದ ಗುರು ರೂಪಾ ಪದ್ಮನಾಭನ್ ಇವರುಗಳು ಸಂಗೀತ ಉತ್ಸವವನ್ನು ನಡೆಸಿಕೊಡಲಿದ್ದು ಹಾಗೂ ನೃತ್ಯ ಉತ್ಸವದಲ್ಲಿ ಅರುಣೋದಯ ಕಲಾ ನಿಕೇತನ್ ಇದರ ಗುರು ಮೀನಾಕ್ಷಿ ಶ್ರೀಯಾನ್ ಇವರ ಶಿಷ್ಯಂದಿರಿಂದ ಭರತನಾಟ್ಯ, ಗುರು ನಿಧಿ ಪ್ರಭು ಇವರ ನಾದ ನಿಧಿ ತಂಡದವರಿಂದ ಕಥಕ್, ಮುಂಬೈಯ ಸರ್ಫೋಜಿರಾಜೇಶ್ ಭರತ ಕಾಲೇಜ್ ಆಫ್ ಫೈನ್ ಆರ್ಟ್ಸ್ ಆ್ಯಂಡ್ ಕಲ್ಚರ್ ಇದರ ಗುರು ಸಂಧ್ಯಾ ಪುರೇಚಾ ಇವರ ಶಿಷ್ಯಂದಿರಿಂದ ಭರತನಾಟ್ಯ, ವೈಷ್ಣೋವಿ ಕಲಾ ಕ್ಷೇತ್ರದ ಗುರು ಆಶಾ ನಂಬಿಯಾರ್ ಇವರಿಂದ ಒಡಿಸ್ಸಿ, ನಲಂದ ನೃತ್ಯ ಕಲಾ ಮಹಾ ವಿದ್ಯಾಲಯದ ಗುರು ಉಮಾ ರೆಲೆ ಇವರ ಶಿಷ್ಯಂದಿರಿಂದ ಭರತನಾಟ್ಯ, ನೃತ್ಯಕಲಾಂಜಲಿ ಇನ್ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ ಇದರ ಗುರು ರಮೇಶ್ ಕೋಳಿ ಇವರ ಶಿಷ್ಯಂದಿರಿಂದ ಕೂಚಿಪುಡಿ ಮತ್ತು ನೃತ್ಯಾಭಿನಯದ ಗುರು ಕಬಿತ ಮೊಹಾಂತಿ ಇವರ ಶಿಷ್ಯಂದಿರಿಂದ ಒಡಿಸ್ಸಿ ಪ್ರಸ್ತುತಗೊಳ್ಳಲಿದೆ.

