ಮಂಗಳೂರು : ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಇಲ್ಲಿ ನಾಟ್ಯಾಚಾರ್ಯ ಮೋಹನ ಕುಮಾರ್ ನವತ್ಯುತ್ಸವ ಸರಣಿ 22ನೇ ನೃತ್ಯ ಮಾಲಿಕೆಯು ದಿನಾಂಕ 29 ಅಕ್ಟೋಬರ್ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಾಟ್ಯನಿಲಯಂ ಮಂಜೇಶ್ವರ ಇದರ ನೃತ್ಯ ಗುರು ವಿದ್ವಾನ್ ಬಾಲಕೃಷ್ಣ ಮಂಜೇಶ್ವರ “ಭರತನಾಟ್ಯವು ಕೇವಲ ಮನರಂಜನೆಗಾಗಿ ಮಾತ್ರ ಸೀಮಿತವಲ್ಲ. ಮನುಷ್ಯನ ಮನಸ್ಸಿನ, ಆತ್ಮಶುದ್ಧಿಗಾಗಿ ದೇವತಾ ಸ್ವರೂಪಿ ಕಲೆಯಾಗಿದ್ದು ಸಮಾಜದಲ್ಲಿ ಗೌರವಯುತವಾದ ಮನುಷ್ಯನಿಗೆ ಗೌರವ ಸಿಕ್ಕುವ ಕಲೆ ಭರತನಾಟ್ಯ. ಗುರು ಶಿಷ್ಯ ಪರಂಪರೆ ಇಂದು ಕಾಣಸಿಗುವುದು ಇಲ್ಲೆ. ಗುರುವಿನ ಮಾರ್ಗದರ್ಶನದಲ್ಲಿ ನೃತ್ಯ ಅಭ್ಯಾಸ ಮಾಡಿದಾಗ ಮಾತ್ರ ಅದೇ ಶಾಶ್ವತ” ಎಂದು ನುಡಿದರು.

ಗುರುಗಳಾದ ಉಳ್ಳಾಲ್ ಮೋಹನ ಕುಮಾರ್ ಶುಭ ಹಾರೈಸಿದರು. ವಿದುಷಿ ರಾಜಶ್ರೀ ಉಳ್ಳಾಲ್ ಧನ್ಯವಾದ ನೀಡಿ, ಗುರು ಶ್ರೀಧರ ಹೊಳ್ಳ ನಿರೂಪಿಸಿದರು. ಮಾಸ್ಟರ್ ಪ್ರದ್ಯುಮ್ನ ಇವರು ಮನೋಜ್ಞವಾದ ನೃತ್ಯ ಪ್ರದರ್ಶನ ನೀಡಿದರು. ವಿದ್ವಾನ್ ಚಂದ್ರಶೇಖರ ನಾವಡ, ವಿದುಷಿ ಪ್ರತಿಮಾ ಶ್ರೀಧರ್, ಡಾ. ಅಶ್ವಿನ್, ಶಾಲಿನಿ, ಶಾಲಿನಿ ಬಾಲಕೃಷ್ಣ, ವಿದುಷಿ ಚಂದ್ರಿಕಾ ಮೊದಲಾದವರು ಉಪಸ್ಥಿತರಿದ್ದರು.
 
									 
					