ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ ಮಿಲಾನ್‌ನ ಇಟಲಿಯ ಇನ್ಸಿಟ್ಯೂಟ್ ಲಿಯೋನಿ ಶಾಲೆಯ ವಿದ್ಯಾರ್ಥಿಗಳ ನಿಯೋಗ ದಿನಾಂಕ 26 ಅಕ್ಟೋಬರ್ 2025ರಂದು ಭೇಟಿ ನೀಡಿತು. ಶಾಲೆಯ ಪ್ರಿನ್ಸಿಪಾಲ್ ಫಾ. ರೋಹನ್ ಡಿ. ಅಲ್ವೇಡಾ ಎಸ್.ಜೆ. ನಿಯೋಗದ ಸದಸ್ಯರನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಭರತನಾಟ್ಯ ಕಲಾವಿದೆ ಅಕ್ಷತಾ ಬೈಕಾಡಿ ಭರತನಾಟ್ಯ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಈ ತಂಡದಲ್ಲಿ ಶಿಕ್ಷಕ ಸಂಯೋಜಕಿ ಬೆರ್ನಡೆಟ್ ವಾಕ್ಷೆ ಮತ್ತು ವಿದ್ಯಾರ್ಥಿಗಳು ಜತೆಗಿದ್ದರು. ಶಾಲೆಯಲ್ಲಿ ಒಂದು ವಾರದ ಸಾಂಸ್ಕೃತಿಕ ವಿನಿಮಯಕ್ಕಾಗಿ ನಾನಾ ಚಟುವಟಿಕೆ ರೂಪಿಸಿವೆ. ವಿನಿಮಯ ಕಾರ್ಯಕ್ರಮ ಈಗ ಮೂರನೇ ವರ್ಷಕ್ಕೂ ಮುಂದುವರಿಯುತ್ತಿದ್ದು, ಜಾಗತಿಕ ಅಧ್ಯಯನ, ಸಂಸ್ಕೃತಿಯ ಅರಿವು ಮತ್ತು ಸ್ನೇಹವನ್ನು ಬೆಳೆಸುವಲ್ಲಿ ಸಹಾಯಕವಾಗುತ್ತಿದೆ.
 
  
  
  
 
 
									 
					