ಬಿ.ಸಿ. ರೋಡ್ : ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ.) ಪುತ್ತೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ನೃತ್ಯ ಧಾರಾ’ ಮತ್ತು ‘ಕಲಾನಯನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 01 ನವೆಂಬರ್ 2025 ರಂದು ಸಂಜೆ 3-30 ಗಂಟೆಗೆ ಬಂಟ್ವಾಳ ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ನೃತ್ಯ ಗುರುಗಳಾದ ವಿದುಷಿ ನಯನ ವಿ. ರೈ ಇವರು ವಹಿಸಲಿದ್ದು, ಪುತ್ತೂರಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು ಮತ್ತು ಪುರಾತತ್ವ ಸಂಶೋಧಕರಾದ ಡಾ. ವೈ. ಉಮಾನಾಥ ಶೆಣೈ ಇವರಿಗೆ ‘ಕಲಾನಯನ’ ಪ್ರಶಸ್ತಿ ಪ್ರದಾನ ಮತ್ತು ಖ್ಯಾತ ಬೆಳಕು ವಿನ್ಯಾಸಕಾರರಾದ ಪೃಥ್ವಿನ್ ಕೆ. ಉಡುಪ ಇವರನ್ನು ಸನ್ಮಾನಿಲಾಗುವುದು. ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಸ್ತುತಗೊಳ್ಳುವ ‘ನೃತ್ಯ ಧಾರಾ’ ಭರತನಾಟ್ಯಕ್ಕೆ ನಟುವಾಂಗದಲ್ಲಿ ವಿದುಷಿ ರೋಹಿಣಿ ಉದಯ್, ಹಾಡುಗಾರಿಕೆಯಲ್ಲಿ ಶರತ್ ಮಂಗಳೂರು ಮತ್ತು ವಿದುಷಿ ಗಾನ ಪಿಲಿಂಜ, ಮೃದಂಗದಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್ ಉಡುಪಿ, ಕೊಳಲಿನಲ್ಲಿ ವಿದ್ವಾನ್ ಕೃಷ್ಣ ಗೋಪಾಲ ಆಚಾರ್ಯ ಪುಂಜಾಲಕಟ್ಟೆ, ರಿದಂ ಪ್ಯಾಡಿನಲ್ಲಿ ಸುಹಾಸ್ ಹೆಬ್ಬಾರ್ ಪುತ್ತೂರು ಇವರುಗಳು ಸಹಕರಿಸಲಿದ್ದಾರೆ.
 
  
  
 
 
									 
					