ಕೊಡಿಯಾಲಬೈಲು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ವತಿಯಿಂದ ವಚನ ಸಂಭ್ರಮ-ವಚನ ಸಾಹಿತ್ಯದ ಬಗ್ಗೆ ರಸಪ್ರಶ್ನೆ ಸ್ಪರ್ಧೆಯ ಸರಣಿ ಕಾರ್ಯಕ್ರಮವು ದಿನಾಂಕ 01 ನವೆಂಬರ್ 2025ರಂದು ಶಾರದಾ ವಿದ್ಯಾಲಯದಲ್ಲಿ ನಡೆಯಿತು.

ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಉದ್ಘಾಟಿಸಿ, “ವಚನಸಾಹಿತ್ಯದ ತತ್ವ ಸಿದ್ಧಾಂತಗಳು ಮಕ್ಕಳಿಗೆ ಮುಟ್ಟಿಸುವುದು ಉತ್ತಮ ಕಾರ್ಯ” ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, “ಶಾಲೆಗಳಿಗೆ ತೆರಳಿ ವಚನ ಸಾಹಿತ್ಯ ಬೇರೆ ಬೇರೆ ಪ್ರಕಾರಗಳ ಸ್ಪರ್ಧೆಯನ್ನು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಜತೆಗೆ ವಚನ ತತ್ವದಲ್ಲಿ ಇರುವ ಉತ್ತಮ ಸಂಸ್ಕಾರದ ಅರಿವು ಮೂಡಿಸುವಲ್ಲಿ ಪ್ರಯೋಜನಕಾರಿ ಆಗುತ್ತದೆ” ಎಂದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ. ಜಯಪ್ಪ ಮಂಗಳೂರು ಉತ್ತರ ವಲಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಚಂದ್ರಿಕಾ ಪ್ರಭಾಕರ್, ಅಖಿಲ ಭಾರತ ವೀರಶೈವ ಮಹಾಸಭಾ ದ.ಕ. ಘಟಕದ ಅಧ್ಯಕ್ಷ ಬಸವರಾಜ ಉಪಸ್ಥಿತರಿದ್ದರು. ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ಪ್ರಸ್ತಾವಿಸಿದರು. ಉಮಾ ಪಲಕ್ಷಪ್ಪ ಸ್ವಾಗತಿಸಿ, ಶಕುಂತಲಾ ವಂದಿಸಿದರು. ಅನುಪಮಾ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ, ಉಮಾ, ರಮೇಶ್, ವಿದ್ಯಾ ಭಾರ್ಗಿಣಿ ಮಠ್, ಶ್ರುತಿ, ದಾಕ್ಷಾಯಿಣಿ, ಸುನಂದಾ ಕನ್ಹಯಿ ಭಾಗವಹಿಸಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ಸೋಹಮ ವಸವಾಡೆ ಪ್ರಥಮ, ದೃಶ್ಯನ್ ವೈ.ಕೆ. ದ್ವಿತೀಯ, ಯಶಸ್ ಬಿ.ಎಸ್. ತೃತೀಯ ಸ್ಥಾನ ಪಡೆದರು.

