ಬೆಂಗಳೂರು : ಬೆಂಗಳೂರು ಏಷಿಯನ್ ಥಿಯೇಟರ್ ಇದರ ವತಿಯಿಂದ ಒಡನಾಡಿ ಬಂಧು ಸಿ.ಜಿ.ಕೆ. – 75 ಮಾಸದ ನೆನಪು ಸರಣಿ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆಯನ್ನು ದಿನಾಂಕ 05 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಏಷಿಯನ್ ಥಿಯೇಟರ್ ಇದರ ಅಧ್ಯಕ್ಷರಾದ ಸೂರ್ಯಕಾಂತ ಗುಣಕಿಮಠ ಇವರು ವಹಿಸಲಿದ್ದು, ಹಿರಿಯ ರಂಗ ಸಂಘಟಕರಾದ ಶ್ರೀನಿವಾಸ್ ಜಿ. ಕಪ್ಪಣ್ಣ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಾಟಕಕಾರರಾದ ಹೂಲಿಶೇಖರ್ ಮತ್ತು ಆಕೃತಿ ಕನ್ನಡ ಪತ್ರಿಕೆಯ ಸಂಪಾದಕಿ ಶ್ರೀಮತಿ ಶಾಲಿನಿ ಪ್ರದೀಪ್ ಇವರ ಗೌರವ ಉಪಸ್ಥಿತಿಯಲ್ಲಿ ರಂಗ ನಿರ್ದೇಶಕರಾದ ಶಶಿಧರ್ ಭಾರಿಘಾಟ್ ಇವರು ‘ಸ್ವಾತಂತ್ರ್ಯದ ಕಿಡಿಗಳು’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಹೂಲಿಶೇಖರ್ ರಚನೆಯ ‘ಬೆಕುವ’ ನಾಟಕ ಸಿದ್ದರಾಮ ಕೊಪ್ಪರ್ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

									 
					