ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಪರಂಪರೆ 350 ವರ್ಷಗಳ ಸುದೀರ್ಘ ಇತಿಹಾಸ, ಇಂದು 6ನೇ ತಲಾಂತರದಲ್ಲಿ ನಡೆಯುತ್ತಿರುವುದು ಸ್ತುತ್ಯಾರ್ಹ. ಈ ಕಲೆಯ ಭವಿಷ್ಯತ್ತಿನ ಭದ್ರ ಬುನಾದಿಗಾಗಿ ಹುಟ್ಟು ಹಾಕಿರುವ ಸಂಸ್ಥೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ದಿನಾಂಕ 29 ಅಕ್ಟೋಬರ್ 2025ರಂದು ಪರಮಾದರಣೀಯ ಶ್ರೀ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಚಿತ್ತೈಸಿ, ತಮ್ಮ ಅಮೃತ ಹಸ್ತದಿಂದ ‘ಗೊಂಬೆ ಮ್ಯೂಜಿಯಂ’ ಉದ್ಘಾಟನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸೆಂಚುರಿ ಬಿಲ್ಡರ್ಸ್ ಇದರ ಆಡಳಿತ ನಿರ್ದೇಶಕರಾದ ಡಾ. ಪಿ. ದಯಾನಂದ ಪೈ ಹಾಗೂ ಪತ್ನಿ ಶ್ರೀಮತಿ ಮೋಹಿನಿ ಡಿ. ಪೈ ದಂಪತಿಗಳು ಪಾಲ್ಗೊಂಡು ಗೊಂಬೆಯಾಟದ ಉಳಿವಿಗಾಗಿ ತಮ್ಮಿಂದಾದ ಪ್ರೋತ್ಸಾಹ ನೀಡುತ್ತೇವೆ ಅಂತ ಆಶ್ವಾಸನೆ ನೀಡಿದರು. ಜಿ.ಎಸ್.ಬಿ. ಸಮಾಜದ ಹಲವಾರು ಗಣ್ಯರೂ ನೆರೆದಿದ್ದರು. ತದನಂತರ ಭಾಸ್ಕರ್ ಕೊಗ್ಗ ಕಾಮತ್ ನೇತೃತ್ವದಲ್ಲಿ ನಡೆದ ಗೊಂಬೆಯಾಟ ಪ್ರಾತ್ಯಕ್ಷಿಕೆಯನ್ನೂ ಶಾಂತ ಚಿತ್ತದಿಂದ ನೋಡಿ ಹರಸಿ, ಹಾರೈಸಿದರು. ನಾಗೇಶ್ ಶ್ಯಾನುಭಾಗ್ ಹಾಗೂ ಉದಯ ಭಂಡಾರ್‌ಕಾರ್ ಕಾರ್ಯಕ್ರಮ ನಿರೂಪಿಸಿದರು.
