ಮಡಿಕೇರಿ : ಕನ್ನಡ ಭವನ ಕೊಡಗು ಜಿಲ್ಲಾ ಘಟಕ ಇವರ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಕಣ್ಣಾ ಮುಚ್ಚಾಲೆ..!!’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 09 ನವೆಂಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಮಡಿಕೇರಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೊಡಗು ಕನ್ನಡ ಭವನದ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಇವರ ಅಧ್ಯಕ್ಷತೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷರಾದ ಅನಂತಶಯನ ಬಿ.ಜಿ., ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀಮತಿ ಬಿ.ಆರ್. ಸವಿತಾ ರೈ, ಕೇಂದ್ರ ಸಮಿತಿ ಕನ್ನಡ ಭವನದ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್, ಹಿರಿಯ ಸಾಹಿತಿಗಳಾದ ಭಾರದ್ವಾಜ್ ಕೆ. ಆನಂದತೀರ್ಥ, ‘ಕಣ್ಣಾ ಮುಚ್ಚಾಲೆ’ ಪುಸ್ತಕದ ಬರಹಗಾರರಾದ ಶ್ರೀಮತಿ ರುಬೀನಾ ಎಂ.ಎ. ಮತ್ತು ಮರ್ಕರ ಪೋಸ್ಟ್ ಪತ್ರಿಕೆಯ ಸಂಪಾದಕರಾದ ಜೈರೋಸ್ ಧೋಮಸ್ ಅಲೆಕ್ಸಾಂಡರ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

