ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ದಿನಾಂಕ 03 ನವೆಂಬರ್ 2025ರಂದು ‘ಭೀಷ್ಮ ಸೇನಾಧಿಪತ್ಯ’ ಪ್ರಸಂಗದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಪರೀಕ್ಷಿತ್ ಹಂದ್ರಟ್ಟ, ಸಮರ್ಥ ವಿಷ್ಣು ಈಶ್ವರಮಂಗಲ ಸಹಕರಿಸಿದರು. ಮುಮ್ಮೇಳದಲ್ಲಿ ಭೀಷ್ಮ (ಭಾಸ್ಕರ್ ಶೆಟ್ಟಿ ಸಾಲ್ಮರ ಮತ್ತು ಭಾಸ್ಕರ್ ಬಾರ್ಯ), ಕೌರವ (ಗುಡ್ಡಪ್ಪ ಬಲ್ಯ), ಕರ್ಣ (ದುಗ್ಗಪ್ಪ ನಡುಗಲ್ಲು), ದ್ರೋಣ (ಲಕ್ಷ್ಮೀ ಕಾಂತ ಹೆಗ್ಡೆ ಪುತ್ತೂರು) ಸಹಕರಿಸಿದರು. ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ಅಗಲಿದ ಯಕ್ಷಗಾನದ ಹಿರಿಯ ಕಲಾವಿದ ಶಂಭುಶರ್ಮ ವಿಟ್ಲರವರ ಕುರಿತು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಇವರ ಉಪಸ್ಥಿತಿಯಲ್ಲಿ ಭಾಸ್ಕರ್ ಶೆಟ್ಟಿ ಸಾಲ್ಮರ, ಗುಡ್ಡಪ್ಪ ಬಲ್ಯ ಹಾಗೂ ಭಾಸ್ಕರ್ ಬಾರ್ಯರು ನುಡಿನಮನ ಸಲ್ಲಿಸಿದರು. ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು.

