ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ದಿನಾಂಕ 08 ನವೆಂಬರ್ 2025ರಂದು ಸಂಜೆ 4-00 ಗಂಟೆಗೆ ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-8’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದಾರೆ. ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಕೊಂಪದವು ಮುಖ್ಯ ಅತಿಥಿಯಾಗಿ ಹಾಗೂ ಕೊಂಕಣಿಯ ಹಿರಿಯ ಕವಿ, ಸಾಹಿತಿಯಾದ ಶ್ರೀ ಜೊಸ್ಸಿ ಪಿಂಟೊರವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಖ್ಯಾತ ನಾಟಕಕಾರ ಹಾಗೂ ಚಲನಚಿತ್ರ ನಿರ್ಮಾಪಕರಾದ ಶ್ರೀ ಹೆನ್ರಿ ಡಿಸಿಲ್ವರವರಿಗೆ ಸನ್ಮಾನವನ್ನು ಆಯೋಜಿಸಲಾಗಿದೆ.
ಶ್ರೀಮತಿ ಐರಿನ್ ರೆಬೆಲ್ಲೊ ಇವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಮಾರ್ಸೆಲ್ ಡಿಸೋಜ (ಮಾಚ್ಚಾ ಮಿಲಾರ್), ಅಸುಂತಾ ಡಿಸೋಜ, ಸೃಜನಾ ಮಥಾಯಸ್, ಚಂದ್ರಿಕಾ ಮಲ್ಯ, ಫ್ಲಾವಿಯಾ ಅಲ್ಬುಕರ್ಕ್, ರವೀಂದ್ರ ನಾಯಕ ಸಣ್ಣಕ್ಕಿಬೆಟ್ಟು, ಪ್ರವೀಣ್ ತಾವ್ರೊ, ಜೀವನ್ ಕ್ರಾಸ್ತಾ, (ಜೀವ್ ನಿಡ್ಡೋಡಿ), ಲ್ಯಾನ್ಸಿ ಸಿಕ್ವೇರ ಸುರತ್ಕಲ್, ರೊಯ್ಸ್ಟನ್ ಡಿಕುನ್ಹ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸುವರು.
