ಬೆಳ್ತಂಗಡಿ : ಕರ್ನಾಟಕ ಗಮಕ ಕಲಾ ಪರಿಷತ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ದಿನಾಂಕ 01 ನವೆಂಬರ್ 2025ರಂದು ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಶೇಷವಾಗಿ ಗಮಕ ವಾಚನ ವ್ಯಾಖ್ಯಾನವನ್ನು ಮಾಡುವುದರ ಮೂಲಕ ಆಚರಿಸಲಾಯಿತು.
ಪದವಿ ಪೂರ್ವ ಕನ್ನಡ ತರಗತಿಯ ಕನ್ನಡ ಪಠ್ಯದ ಲಕ್ಷ್ಮೀಶ ಕವಿಯ ಕಾವ್ಯ ಭಾಗವನ್ನು ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ವಾಚನ ಮಾಡಿದರೆ, ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾ ಅಧ್ಯಕ್ಷ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ವ್ಯಾಖ್ಯಾನವನ್ನು ಮಾಡಿದರು. ಬಳಿಕ ಪ್ರಾಂಶುಪಾಲರಾದ ಶ್ರೀ ಸುಕುಮಾರ್ ಜೈನ್ ಮತ್ತು ಸಂಸ್ಥೆಯ ಅಧ್ಯಾಪಕರಿಂದ ಮೋಹನ ಕಲ್ಲೂರಾಯರನ್ನು ಸನ್ಮಾನ ಮಾಡಿ ಗೌರವಿಸಲಾಯಿತು. ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷ ಡಾ. ಗಣೇಶ್ ಭಟ್, ಸಹಾಯಕ ಉಪನ್ಯಾಸಕರಾದ ಆನಂದ, ಡಾ. ಅಮೃತ, ಹೈಸ್ಕೂಲ್ ಮುಖ್ಯೋಪಾಧ್ಯಾಯನಿ ಶ್ರೀಮತಿ ಪೂರ್ಣಿಮಾ ಮತ್ತು ಉಳಿದ ಅಧ್ಯಾಪಕ ವೃಂದದವರು ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿದರು.

