ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರ ವತಿಯಿಂದ ಪ್ರತಿ ತಿಂಗಳ 2ನೇ ಶನಿವಾರ ನಡೆಯುವ ಸರಣಿ ರಂಗಮಾಲೆ – 100ರ ಸಂಭ್ರಮೋತ್ಸವವನ್ನು ದಿನಾಂಕ 07ರಿಂದ 09 ನವೆಂಬರ್ 2025ರಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 07 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಸಿದ್ಧೇಶ್ವರ ನನಸುಮನೆ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಜ್ಞಾನ ದೇಗುಲ ನಮ್ಮೂರ ಸರ್ಕಾರಿ ಶಾಲೆ’, ದಿನಾಂಕ 08 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ರಾಮಕೃಷ್ಣ ಬೆಳ್ತೂರು ಇವರ ನಿರ್ದೇಶನದಲ್ಲಿ ‘ಸುಮ್ ಸುಮ್ಕೆ’ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 09 ನವೆಂಬರ್ 2025ರಂದು ಸಂಜೆ 4-00 ಗಂಟೆಗೆ ಕನ್ನಡ ರಾಜ್ಯೋತ್ಸವ ಹಾಗೂ 6-30 ಗಂಟೆಗೆ ‘ಕಲಾ ವೈವಿಧ್ಯ’ ಜನಪದರು ಪ್ರೇಕ್ಷಕರಿಂದ ಕಲಾ ಪ್ರದರ್ಶನ ನಡೆಯಲಿದೆ.

