ಸುರತ್ಕಲ್ : ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ‘ವಿಶುಕುಮಾರ್ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಟ್ರಸ್ಟಿನ ಸದಸ್ಯ ಹಾಗೂ ಹಿರಿಯ ಸಂಶೋಧಕ ಬೆನೆಟ್ ಜಿ. ಅಮ್ಮಣ್ಣ ಇವರನ್ನು ದಿನಾಂಕ 06 ನವೆಂಬರ್ 2025ರಂದು ಗೌರವಿಸಲಾಯಿತು.
ಟ್ರಸ್ಟಿನ ಅಧ್ಯಕ್ಷೆ ಮತ್ತು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮಾತನಾಡಿ “ಸಾಹಿತ್ಯ ಮತ್ತು ಸಂಶೋಧನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾಹಿತಿ ಬೆನೆಟ್ ಜಿ. ಅಮ್ಮಣ್ಣ ಇವರ ಸೇವೆಗೆ ಸಂದಿರುವ ಗೌರವ ಇದಾಗಿದೆ” ಎಂದರು.
ಬೆನೆಟ್ ಜಿ. ಅಮ್ಮಣ್ಣ ಇವರು ಮಾತನಾಡಿ “ಗ್ರಂಥಪಾಲ ಎಂದರೆ ಕೇವಲ ಗ್ರಂಥಗಳನ್ನು ಕಾಯುವವನಾಗಿರದೆ ಜ್ಞಾನಾರ್ಜನೆಯ ಹಸಿವಿನಿಂದ ಆಗಮಿಸುವ ಓದುಗನ ಹಸಿವನ್ನು ತಣಿಸಲು ನೆರವಾಗುವ ಮಾರ್ಗದರ್ಶಕ ಎಂಬ ಸಂಶೋಧಕ ಶ್ರೀನಿವಾಸ ಹಾವನೂರು ಅವರ ಮಾತನ್ನು ನೆನಪಿಸಿ ಅದರಂತೆ ನಡೆದಿದ್ದೇನೆ” ಎಂದರು.
ಟ್ರಸ್ಟಿನ ಕಾರ್ಯದರ್ಶಿ ಕೃಷ್ಣಮೂರ್ತಿ “ಪ್ರಗತಿಪರ ಚಿಂತನೆಯ ಸಾಹಿತಿಯಾಗಿದ್ದ ವಿಶುಕುಮಾರ್ ಅವರ ನೆನಪಿನ ಪ್ರಶಸ್ತಿ ಬೆನೆಟ್ ಜಿ. ಅಮ್ಮಣ್ಣ ಪಡೆಯುತ್ತಿರುವುದು ಅಭಿಮಾನದ ವಿಚಾರವಾಗಿದೆ” ಎಂದರು. ಟ್ರಸ್ಟಿನ ಕೋಶಾಧಿಕಾರಿ ಡಾ. ಜ್ಯೋತಿ ಚೇಳ್ಯಾರು ಸ್ವಾಗತಿಸಿ, ಸದಸ್ಯೆ ಸುಜಾತ ಸುವರ್ಣ ವಂದಿಸಿದರು.
