ಮಂಗಳೂರು : ದಿ ಇನ್ಸ್ಟಿ ಟ್ಯೂಶನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮತ್ತು ಇನ್ಸ್ಟಿ ಟ್ಯೂಶನ್ ಆಫ್ ವ್ಯಾಲೂವರ್ಸ್ ಮತ್ತು ಕೊಡಗು ದಕ್ಷಿಣ ಕನ್ನಡ ಮತ್ತು ಉಡುಪಿ ಇಂಜಿನಿಯರ್ಸ್ ಅಸೋಸಿಯೇಷನ್ ಇವರ ವತಿಯಿಂದ ಕನ್ನಡ ರಾಜ್ಯೋತ್ಸವದ ಬಗ್ಗೆ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 11 ನವೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟಲ್ ರಸ್ತೆಯಲ್ಲಿರುವ ಹೊಟೇಲ್ ವುಡ್ ಲ್ಯಾಂಡ್ಸ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕಲ್ಲಚ್ಚು ಪ್ರಕಾಶನದ ಪ್ರಕಾಶಕರು ಸಾಹಿತಿ ಮಹೇಶ ಆರ್. ನಾಯಕ್ ಇವರು ‘ಕನ್ನಡದ ಬಳಕೆ ಒಂದು ನೋಟ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

