ಮಂಗಳೂರು: ಮಂಗಳೂರು ಕಲ್ಲಚ್ಚು ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಪಾಟೀಲರ ಜತೆಗೆ ಒಂದು ಸಂಜೆ, ಮಾತುಕತೆ ಸಂವಾದ ಕಾರ್ಯಕ್ರಮವು ವುಡ್ ಲ್ಯಾಂಡ್ ಹೊಟೇಲ್ ಆವರಣದಲ್ಲಿ ದಿನಾಂಕ 04-05-2023 ರಂದು ನಡೆಯಿತು.
ಕನ್ನಡದ ಹಿರಿಯ ಮತ್ತು ಪ್ರಸಿದ್ಧ ಸಾಹಿತಿ ಮೂಲತ ಗೋಕಾಕ್ ನ ಪ್ರಸ್ತುತ ಧಾರವಾಡದಲ್ಲಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಪಾಟೀಲ ಅವರು ಈ ಕಾಲದ ಕನ್ನಡದ ಸಾಹಿತ್ಯ ಮತ್ತು ಸಾಹಿತಿಗಳು ಅನಿವಾರ್ಯವಾಗಿ ತ್ರೀವ ಗತಿಯಲ್ಲಿ ಬದಲಾಗುತ್ತಿದ್ದು ಎಡ ಅಥವಾ ಬಲದ ಮಾನಸಿಕತೆಯೊಂದಿಗೆ ರಾಜಕೀಯ ನೆಲೆಯಿಂದ ಗುರುತಿಸಿಕೊಳ್ಳುವ ಜಂಜಾಟದ ಒತ್ತಡದಲ್ಲಿ ಇದ್ದಾರೆ ಎಂದು ಅವರ ಅಭಿಪ್ರಾಯಪಟ್ಟಿದ್ದಾರೆ.
ಆಶಾವಾದಿ ಪ್ರಕಾಶನದ ವಲೇರಿಯನ್ ಕ್ವಾಡ್ರಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಹಿತ್ಯ ವಲಯದ ಕಾಸರಗೋಡು ನಾರಾಯಣ ಮೂಡಿತ್ತಾಯ, ವಿಜಯಶ್ರೀ ಹಾಲಾಡಿ, ಮಾರ್ಶಲ್ ಡಿಸೋಜಾ, ಎಸ್ ಎಂ ಶಿವಪ್ರಕಾಶ್, ಎಡ್ವರ್ಡ್ ಲೋಬೊ, ಗುರುಪ್ರಸಾದ್, ವಿಯಯೇಂದ್ರ ಪಾಟೀಲ… ಮೊದಲಾದವರು ಉಪಸ್ಥಿತರಿದ್ದರು.
ಕಲ್ಲಚ್ಚು ಪ್ರಕಾಶನದ ಸಾಹಿತಿ ಪ್ರಕಾಶಕ ಮಹೇಶ ಆರ್ ನಾಯಕ್ ಸ್ವಾಗತಿಸಿ ನಿರೂಪಿಸಿದರು. ಅತ್ಯಂತ ಆಕರ್ಷಕವಾಗಿ ಒಂದು ಗಂಟೆ ಕಾಲ ನಡೆದ ಈ ಸಮಾರಂಭದಲ್ಲಿ ಸಾಹಿತ್ಯದ ವಿವಿಧ ಮಜಲುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.