ಸುರತ್ಕಲ್ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಇಡ್ಯಾ ಸುರತ್ಕಲ್ ಇವರ ವತಿಯಿಂದ ಮನು ಇಡ್ಯಾ ಇವರ ‘ಗಂಧದ ಕೊರಡ್’ ಮತ್ತು ‘ತಾಂಗ್ ನಿರೆಲ್’ ಎರಡು ನಾಟಕಗಳ ಪುಸ್ತಕ ಬಿಡುಗಡೆ ಮತ್ತು ಚಾವಡಿ ತಮ್ಮನ ಕಾರ್ಯಕ್ರಮವನ್ನು ದಿನಾಂಕ 13 ನವೆಂಬರ್ 2025ರಂದು ಸಂಜೆ 4-00 ಗಂಟೆಗೆ ಸುರತ್ಕಲ್ ಇಡ್ಯಾ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ವಹಿಸಲಿದ್ದು, ವಿಜಯ ಕರ್ನಾಟಕದ ನಿವೃತ್ತ ಸ್ಥಾನೀಯ ಸಂಪಾದಕರಾದ ಯು.ಕೆ. ಕುಮಾರನಾಥ ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಹಿರಿಯ ರಂಗ ನಟಿ ಗೀತಾ ಸುರತ್ಕಲ್ ಇವರು ಚಾವಡಿ ತಮ್ಮನದ ಅಭಿನಂದನಾ ಮಾತುಗಳನ್ನಾಡಲಿದ್ದು, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀಮತಿ ಯಮುನಾ ಶೇಖರ್, ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀಮತಿ ಗುಣವತಿ ರಮೇಶ್ ಮತ್ತು ಸಿಂಗಾರ ಸುರತ್ಕಲ್ ಇದರ ಅಧ್ಯಕ್ಷರಾದ ಕೃಷ್ಣಮೂರ್ತಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

