ತುಮಕೂರು : ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆ ‘ರಂಗಕಹಳೆ’ ಬೆಂಗಳೂರು ಇದರ ವತಿಯಿಂದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಮನೋತ್ಸವದ ಪ್ರಯುಕ್ತ ‘ಮಕ್ಕಳ ರಂಗ ಉತ್ಸವ’ವನ್ನು ದಿನಾಂಕ 15 ನವೆಂಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಭರತನಾಟ್ಯ, ಜನಪದ ಗೀತೆ, ಡೊಳ್ಳು ಕುಣಿತ, ಯಕ್ಷಗಾನ ಮತ್ತು ಜನಪದದ ಸಮೂಹ ನೃತ್ಯ, ಆರ್.ಕೆ. ಫಿಲಂ ಸ್ಟೂಡಿಯೋಸ್ ಇವರಿಂದ ಶ್ರೀ ಅಟಲ್ ಬಿಹಾರಿ ವಾಜಪೇಯಿರವರ ಜೀವನಾಧಾರಿತ ‘ಸಾಕ್ಷ್ಯಚಿತ್ರ’, ಸಿ. ಲಕ್ಷ್ಮಣ ಇವರ ನಿರ್ದೇಶನದ ಕಲಾತ್ಮಕ ಚಲನಚಿತ್ರ ‘ಕಾರಣಿಕ ಶಿಶು’ ಪ್ರದರ್ಶನ, ಗುರು ಸಾಗರ್ ಟಿ.ಎಸ್. ಇವರ ನಿರ್ದೇಶನದಲ್ಲಿ ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದವರಿಂದ ‘ನೃತ್ಯ ದರ್ಶನ’, ಬೆಂಗಳೂರಿನ ಗೌರಿಶಂಕರ ಅಕಾಡೆಮಿ ಫಾರ್ ಕಲ್ಚರ್ ಅಂಡ್ ಸ್ಪೋರ್ಟ್ಸ್ ಟ್ರಸ್ಟ್ ಇವರಿಂದ ಸಿ. ಲಕ್ಷ್ಮಣ ಇವರ ನಿರ್ದೇಶನದಲ್ಲಿ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಹಾಗೂ ಬೆಂಗಳೂರಿನ ಪೂಜಾ ಮತ್ತು ತಂಡದವರಿಂದ ಓಹಿಲೇಶ ಲಕ್ಷ್ಮಣ ಇವರ ನಿರ್ದೇಶನದಲ್ಲಿ ‘ಮೋಡಣ್ಣನ ತಮ್ಮ’ ನಾಟಕ ಪ್ರದರ್ಶನಗೊಳ್ಳಲಿದೆ.

