ಕಾಸರಗೋಡು : ಶಂಪಾ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ‘ಡಾ. ಎಸ್.ಎಲ್. ಭೈರಪ್ಪ ಸಂಸ್ಮರಣೆ ಹಾಗೂ ಕೃತಿಗಳ ಅವಲೋಕನ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ 15 ಮತ್ತು 16 ನವೆಂಬರ್ 2025ರಂದು ಕಾಸರಗೋಡಿನ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದೆ.
ದಿನಾಂಕ 15 ನವೆಂಬರ್ 2025ರಂದು ಪೂರ್ವಾಹ್ನ 9-30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಾನಪದ ತಜ್ಞರಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಅಧ್ಯಕ್ಷತೆ ವಹಿಸಲಿದ್ದು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಉದ್ಘಾಟನೆ ಮಾಡಲಿದ್ದಾರೆ. 11-30 ಗಂಟೆಗೆ ನಡೆಯುವ ಗೋಷ್ಠಿ 1ರಲ್ಲಿ ಉಪನ್ಯಾಸಕರಾದ ಟಿ.ಎ.ಎಂ. ಖಂಡಿಗೆ ಇವರು ‘ಉತ್ತರಕಾಂಡ’, ಸಹ ಪ್ರಾಧ್ಯಾಪಕರಾದ ಡಾ. ವೇದಾವತಿ ಇವರು ‘ನಿರಾಕರಣ’ ಮತ್ತು ಕನ್ನಡ ಅಧ್ಯಾಪಕರಾದ ಡಾ. ಸುಭಾಷ್ ಪಟ್ಟಾಜೆಯವರು ‘ಯಾನ’, ಗೋಷ್ಠಿ 2ರಲ್ಲಿ ಖ್ಯಾತ ವಿಮರ್ಶಕರಾದ ಡಾ. ಬಿ. ಜನಾರ್ದನ ಭಟ್ ಇವರು ‘ಗೃಹಭಂಗ’, ಪ್ರಾಧ್ಯಾಪಕರಾದ ಡಾ. ಶಾಂತರಾಜು ಇವರು ‘ಸಾರ್ಥ’, ಪ್ರಾಧ್ಯಾಪಕರಾದ ಡಾ. ಟಿ.ಕೆ. ಕೆಂಪೇಗೌಡ ಇವರು ‘ಆವರಣ’, ಗೋಷ್ಠಿ 3ರಲ್ಲಿ ನಿವೃತ್ತ ಪ್ರಾದೇಶಿಕ ಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಭಟ್ ಎಸ್.ಪಿ. ಇವರು ‘ದೂರಸರಿದರು’, ಪ್ರಾಧ್ಯಾಪಕರಾದ ಡಾ. ಶಾರದ ಇವರು ‘ತಂತು’, ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ ಪಿ. ಇವರು ‘ಪರ್ವ’, ಗೋಷ್ಠಿ 4ರಲ್ಲಿ ಪ್ರಾಧ್ಯಾಪಕರಾದ ಡಾ. ರಾಧಾಕೃಷ್ಣ ಬೆಳ್ಳೂರು ಇವರು ‘ಅಂಚು’, ನಿವೃತ್ತ ಡಿ.ಜಿ.ಎಂ. ಶ್ರೀ ಕೆ. ರಾಮಚಂದ್ರ ಇವರು ‘ಸಾಕ್ಷಿ’, ಪ್ರಾಧ್ಯಾಪಕರಾದ ಪ್ರೊ. ಲಕ್ಷ್ಮೀ ಕೆ. ಇವರು ‘ಮಂದ್ರ’, ಗೋಷ್ಠಿ 5ರಲ್ಲಿ ಪ್ರಾಧ್ಯಾಪಕರಾದ ಡಾ. ಶ್ರೀಧರ ಏತಡ್ಕ ಇವರು ‘ಜಲಪಾತ’, ಸಹಾಯಕ ಪ್ರಾಧ್ಯಾಪಿಕೆ ಡಾ. ಆಶಾಲತಾ ಇವರು ‘ನಾಯಿನೆರಳು’, ಅನುವಾದಕಿ ಶ್ರೀಮತಿ ಮಾಧುರಿ ದೇಶಪಾಂಡೆ ಇವರು ‘ನೆಲೆ’ ಕೃತಿಗಳ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ 5-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ದಿನಾಂಕ 16 ನವೆಂಬರ್ 2025ರಂದು ಪೂರ್ವಾಹ್ನ 9-30 ಗಂಟೆಗೆ ನಡೆಯುವ ಗೋಷ್ಠಿ 6ರಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಅಜಕ್ಕಳ ಗಿರೀಶ್ ಭಟ್ ಇವರು ‘ಅನ್ವೇಷಣ’, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರವೀಣ ಪದ್ಯಾಣ ಇವರು ‘ವಂಶವೃಕ್ಷ’, ಡಾ. ಸೌಮ್ಯ ಹೆಚ್. ಇವರು ‘ಮತದಾನ’, ಗೋಷ್ಠಿ 7ರಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ‘ತಬ್ಬಲಿಯು ನೀನಾದೆ ಮಗನೆ’, ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ. ಸುಜಾತಾ ಎಸ್. ಇವರು ‘ದಾಟು’, ಸಹ ಪ್ರಾಧ್ಯಾಪಕರಾದ ಡಾ. ಸವಿತಾ ಬಿ. ಇವರು ‘ಗ್ರಹಣ’, ಗೋಷ್ಠಿ 8ರಲ್ಲಿ ಸ್ವಾಯತ್ತ ಉನ್ನತ ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ಶ್ರೀಧರ ಎಚ್.ಜಿ. ಇವರು ‘ಧರ್ಮಶ್ರೀ’, ಶಿಕ್ಷಕಿ ಶ್ರೀಮತಿ ಕವಿತಾ ಕೂಡ್ಲು ಇವರು ‘ಕವಲು’ ಕೃತಿಗಳ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. 2-00 ಗಂಟೆಗೆ ‘ಭಿತ್ತಿ’ ಕೃತಿಯ ಕುರಿತು ನಿವೃತ್ತ ರಿಜಿಸ್ಟರ್ ಪ್ರೊ. ಟಿ.ಜಿ. ನರಸಿಂಹಮೂರ್ತಿ ಮತ್ತು ‘ಸಿನಿಮಾ ಕಥಾ ಚಿತ್ರಣ – ಅನಿಸಿಕೆ’ ಬಗ್ಗೆ ರಂಗಚಿನ್ನಾರಿಯ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಇವರು ಸಂವಾದ ನಡೆಯಲಿದ್ದಾರೆ. 3-00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತಿ ರಮಾನಂದ ಬನಾರಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತಕುಮಾರ ಇವರು ಸಮಾರೋಪ ಭಾಷಣ ಮಾಡಲಿದ್ದು, ವಿಶ್ರಾಂತ ಆಕಾಶವಾಣಿ ನಿರ್ದೇಶಕರಾದ ಡಾ. ವಸಂತ ಕುಮಾರ ಪೆರ್ಲ ಇವರು ಕಾರ್ಯಕ್ರಮ ಅವಲೋಕನ ಮಾಡಲಿದ್ದಾರೆ. ಬಳಿಕ ಭೈರಪ್ಪನವರ ಕಾದಂಬರಿ ಆಧಾರಿತ ‘ಮತದಾನ’ ಚಿತ್ರಪ್ರದರ್ಶನ ನಡೆಯಲಿದೆ.

