ಪುತ್ತೂರು : ಆಳ್ವಾಸ್ ಎಜುಕೇಷನ್ ಫೌಂಡೇಷನ್, ಆಳ್ವಾಸ್ ನುಡಿಸಿರಿ – ವಿರಾಸತ್ ಪುತ್ತೂರು ಘಟಕ ಇದರ ವತಿಯಿಂದ ಆಳ್ವಾಸ್ ವಿದ್ಯಾರ್ಥಿ ಕಲಾವಿದರಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ವನ್ನು ದಿನಾಂಕ 16 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಯೋಗದೀಪಿಕ, ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮೀ, ಬಡಗುತಿಟ್ಟು ಯಕ್ಷಗಾನ- ಶ್ರೀರಾಮ ಪಟ್ಟಾಭಿಶೇಕ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ-ವರ್ಷಧಾರೆ, ಪುರುಲಿಯಾ, ತೆಂಕುತಿಟ್ಟು ಯಕ್ಷಗಾನ-ಅಗ್ರಪೂಜೆ, ಬೊಂಬೆ ವಿನೋದಾವಳಿಗಳು ಪ್ರಸ್ತುತಗೊಳ್ಳಲಿವೆ.

