ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ‘ಶ್ರೀ ಆಂಜನೇಯ 57’ ವಾರ್ಷಿಕೋತ್ಸವವು ದಿನಾಂಕ 25 ಡಿಸೆಂಬರ್ 2025ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಅಪರಾಹ್ನ 2-00 ಗಂಟೆಗೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಿಂದ ತಾಳಮದ್ದಳೆ, ಶ್ರೀ ಶ್ರೀ ಎಡನೀರು ಶ್ರೀಗಳ ಸಾನಿಧ್ಯದಲ್ಲಿ ‘ಶ್ರೀಯಕ್ಷಾಂಜನೇಯ ಪ್ರಶಸ್ತಿ’ ಪ್ರದಾನ ಮತ್ತು ಶ್ರೀಮತಿ ಶಾಂತ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಆವಾರ್ಡ್ ಪ್ರದಾನಿಸುವುದೆಂದು ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದರು.
ಪರ್ಲಡ್ಕದ ಶಿವಪೇಟೆಯ ಅಗಸ್ತ್ಯದಲ್ಲಿ ದಿನಾಂಕ 16 ನವೆಂಬರ್ 2025ರಂದು ಜರಗಿದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಸದಸ್ಯರಾದ ಗುಂಡ್ಯಡ್ಕ ಈಶ್ವರ ಭಟ್, ದುಗ್ಗಪ್ಪ ಎನ್., ಪರೀಕ್ಷಿತ್, ವೇಣುಗೋಪಾಲ ಭಟ್, ಹರಿಣಾಕ್ಷಿ ಜೆ. ಶೆಟ್ಟಿ, ಭಾರತಿ ರೈ ಆರಿಯಡ್ಕ, ಆನಂದ ಸವಣೂರು, ಸತೀಶ್ ಕೆ., ಅಚ್ಯುತ ಕೆ., ಶಾರದಾ ಅರಸ್, ಕಿಶೋರಿ ದುಗ್ಗಪ್ಪ ಭಾಗವಹಿಸಿದ್ದರು. ಸ್ವರ್ಣಲತಾ ಭಾಸ್ಕರ್ ವಂದಿಸಿದರು.
