ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ‘ಸಾಹಿತ್ಯ ಚಿಂತನ’ ಕಾರ್ಯಕ್ರಮವು ದಿನಾಂಕ 10 ನವೆಂಬರ್ 2025ರಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತೂರಿನ ಯಶಸ್ ಅಧ್ಯಯನ ಕೇಂದ್ರದ ಉಪನ್ಯಾಸಕ ದರ್ಶನ್ ಗರ್ತಿಕೆರೆ ಮಾತನಾಡಿ, “ಸಾಹಿತ್ಯವು ಜ್ಞಾನವನ್ನು ದಾಖಲಿಸುವ, ಸಂರಕ್ಷಿಸುವ ಮತ್ತು ಹರಡುವ ಒಂದು ಸಾಧನವಾಗಿದೆ. ಇದು ಸಾಮಾಜಿಕ, ಆಧ್ಯಾತ್ಮಿಕ ಅಥವಾ ರಾಜಕೀಯ ವಿಷಯಗಳನ್ನು ಒಳಗೊಂಡಿರುತ್ತದೆ. ಸಾಹಿತ್ಯವು ಮನರಂಜನೆಯನ್ನು ನೀಡುವ ಜೊತೆಗೆ ಓದುಗರಿಗೆ ಜ್ಞಾನವನ್ನು ಒದಗಿಸುವ ಒಂದು ಪ್ರಮುಖ ಮಾಧ್ಯಮವಾಗಿದೆ. ಇದು ಮನುಷ್ಯನಿಗೆ ತಾಳ್ಮೆಯನ್ನು ಕಲಿಸಿ ಕೊಡುತ್ತದೆ. ಪಠ್ಯ ಪುಸ್ತಕಗಳ ಓದಿನೊಂದಿಗೆ ವಿದ್ಯಾರ್ಥಿಗಳು ಕಥೆ, ಕವನ, ಕಾದಂಬರಿಗಳನ್ನು ಓದುವಂತಹ ಹವ್ಯಾಸವನ್ನು ಬೆಳೆಸಿಕೊಂಡರೆ ಜ್ಞಾನರ್ಜನೆ ಹೆಚ್ಚುವ ಜೊತೆಗೆ ಬದುಕಿನಲ್ಲಿ ಬದಲಾವಣೆಗಳು ಕಾಣಬಹುದು” ಎಂದು ಹೇಳಿದರು.


ವಿದ್ಯಾರ್ಥಿಗಳು ಕಿರು ನಾಟಕವನ್ನು ಪ್ರದರ್ಶಿಸಿದರು. ವೇದಿಕೆಯಲ್ಲಿ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಘದ ಸಂಯೋಜಕಿ ರತ್ನಾವತಿ ಬಿ. ಮತ್ತಿತರರು ಭಾಗವಹಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ಅಕ್ಷಿತಾ ಸ್ವಾಗತಿಸಿ, ದ್ವಿತೀಯ ಕಲಾ ವಿಭಾಗದ ಚಿನ್ಮಯ್ ವಂದಿಸಿ, ಮೋಕ್ಷಿತ ಕಾರ್ಯಕ್ರಮ ನಿರ್ವಹಿಸಿದರು.
