ಕಾರ್ಕಳ : ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ.) ಮಂಗಳೂರು ಇದರ ಕಾರ್ಕಳ ಘಟಕದ ಹತ್ತನೇ ಪಟ್ಲ ಸಂಭ್ರಮೋತ್ಸವ ಹಾಗೂ ಯಕ್ಷ ಕಲಾರಂಗ (ರಿ) ಕಾರ್ಕಳ ಇದರ ಹದಿಮೂರನೇ ವಾರ್ಷಿಕೋತ್ಸವವು ಕಾರ್ಕಳ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 15 ನವೆಂಬರ್ 2025ರಂದು ನಡೆಯಿತು.

ಹವ್ಯಾಸಿ ಕಲಾವಿದರಾದ ಶ್ರೀ ಜನಾರ್ದನ ಶಾಸ್ತ್ರಿ ಹಾಗೂ ದಿವಂಗತ ಕೆ. ವಸಂತ ಆಚಾರ್ ಮರೋಣತ್ತರವಾಗಿ ಸುಪುತ್ರ ವಿಕ್ರಮ್ ಇವರು ಪಟ್ಲ ಸಂಭ್ರಮದ ಸಂಮಾನ ಸ್ವೀಕರಿಸಿದರು. ಕಾರ್ಕಳ ಘಟಕದ ಅಧ್ಯಕ್ಷರಾದ ವಿಜಯ ಶೆಟ್ಟಿ ಕಾರ್ಕಳ ದಂಪತಿಗಳನ್ನು ಷಷ್ಠಬ್ಧ ಸಂದರ್ಭದಲ್ಲಿ ಗೌರವಿಸಲಾಯಿತು. ಶ್ರೀ ಸುಜಯ್ ಶೆಟ್ಟಿ (ಎಸ್.ಕೆ.ಎಸ್. ಕಾರ್ಕಳ), ನಂದಕುಮಾರ್ ಹೆಗ್ಡೆ ಅಜೆಕಾರು, ಸಾಣೂರು ಗ್ರಾಮ ಪಂಚಾಯತ್’ನ ಅಧ್ಯಕ್ಷರಾಗಿರುವ ಯುವರಾಜ ಜೈನ್ ಮೂಡಬೆಟ್ಟು, ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಉಪಸ್ಥಿತರಿದ್ದರು. ಕಾರ್ಕಳ ಘಟಕದ ಪ್ರಧಾನ ಸಂಚಾಲಕರಾದ ಪ್ರೊ. ಬಿ. ಪದ್ಮನಾಭ ಗೌಡ ಸ್ವಾಗತಿಸಿ, ಪ್ರೊ. ಕೃಷ್ಣ ಭಟ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿದರು. ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರುಗಿತು.

