ಬೆಂಗಳೂರು : ಪ್ರಸಾರ ಭಾರತಿ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರಸ್ತುತ ಪಡಿಸುವ ‘ಆಕಾಶವಾಣಿ ಸಂಗೀತ್ ಸಮ್ಮೇಳನ 2025’ವನ್ನು ದಿನಾಂಕ 22 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಇಂದಿರಾ ನಗರ ಸಂಗೀತ ಸಭಾದ ಪುರಂದರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಛೇರಿ 1ರಲ್ಲಿ ಪ್ರಸ್ತುತಗೊಳ್ಳುವ ಶಾಸ್ತ್ರೀಯ ಸಂಗೀತದಲ್ಲಿ ಬೆಂಗಳೂರಿನ ಸಹೋದರರಾದ ಹರಿಹರನ್ ಎಂ.ಬಿ. ಮತ್ತು ಅಶೋಕ್ ಎಸ್. ಇವರಿಂದ ಕರ್ನಾಟಕ ಸಂಗೀತ ಹಾಡುಗಾರಿಕೆಗೆ ವಿದ್ವಾನ್ ಮತ್ತೂರು ಆರ್. ಶ್ರೀನಿಧಿ ಇವರು ಪಿಟೀಲು, ವಿದ್ವಾನ್ ಎಚ್.ಎಸ್. ಸುಧೀಂದ್ರ ಮೃದಂಗ ಮತ್ತು ವಿದ್ವಾನ್ ಗಿರಿಧರ್ ಉಡುಪಿ ಇವರು ಘಟದಲ್ಲಿ ಸಹಕರಿಸಲಿದ್ದಾರೆ. ಕಛೇರಿ 2ರಲ್ಲಿ ಪ್ರಸ್ತುತಗೊಳ್ಳುವ ಸುಗಮ ಸಂಗೀತದಲ್ಲಿ ವಿದುಷಿ ಲಕ್ಷ್ಮೀ ನಾಗರಾಜ್ ಇವರ ಭಾವಗೀತೆ ಗಾಯನಕ್ಕೆ ಕೃಷ್ಣ ಉಡುಪ ಕೀಬೋರ್ಡ್, ಸುನಿಲ್ ಡಿ.ಎ. ಕೊಳಲು, ವಿಕಾಸ್ ನರೇಗಲ್ ತಬಲ ಮತ್ತು ಸಾಯಿ ವಂಶಿ ರಿದಮ್ ಪ್ಯಾಡ್ ನಲ್ಲಿ ಸಹಕರಿಸಲಿದ್ದಾರೆ.


