ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ ಮತ್ತು ಆರ್ಟ್ ಕೆನರಾ ಟ್ರಸ್ಟ್ ಇದರ ವತಿಯಿಂದ ‘ವಿಶ್ವ ಪರಂಪರೆ ಸಪ್ತಾಹ’ ಕಾರ್ಯಕ್ರಮವನ್ನು ದಿನಾಂಕ 19 ನವೆಂಬರ್ 2025ರಿಂದ 25 ನವೆಂಬರ್ 2025ರವರೆಗೆ ಪ್ರತಿ ದಿನ ಸಂವಾದ, ಕಾರ್ಯಾಗಾರ ಮತ್ತು ಪ್ರದರ್ಶನದೊಂದಿಗೆ ಮಂಗಳೂರಿನ ಬಲ್ಲಾಳ್ ಭಾಗ್, ಜಿ.ಜಿ. ರೋಡ್, ಕೊಡಿಯಾಲ್ ಗುತ್ತು (ಪಶ್ಚಿಮ), ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 19 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ‘ತುಳು ಭಾಷೆ ಬೊಕ್ಕ ಬದ್ಕ್’ ಎಂಬ ವಿಷಯದ ಬಗ್ಗೆ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಲಿದ್ದಾರೆ. ದಿನಾಂಕ 20 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ “ಇತಿಹಾಸದಿಂದ ಗುರುತಿಸಲ್ಪಟ್ಟ ಪಶ್ಚಿಮ ಗಂಗಾ ರಾಜವಂಶದ ನಾಣ್ಯಗಳು” ಎಂಬ ವಿಷಯದಲ್ಲಿ ಎಂ. ಪ್ರಶಾಂತ್ ಶೇಟ್ ಉಪನ್ಯಾಸ ನೀಡಲಿದ್ದಾರೆ. ದಿನಾಂಕ 21 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಶ್ರುತಿ ಬಂಗೇರ ಇವರು ‘ಯಕ್ಷಗಾನದಲ್ಲಿ ಸ್ತ್ರೀವೇಷ’ ಎಂಬ ವಿಷಯದ ಬಗ್ಗೆ ಸಂವಾದ, ದಿನಾಂಕ 22 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಉಪಸ್ಥಿತಿಯಲ್ಲಿ ‘ನಮ್ಮ ಊರು ನಮ್ಮ ನೆಲ’ ಚಿತ್ರಕಲೆ ಮತ್ತು ರೇಖಾ ಚಿತ್ರ ಪ್ರದರ್ಶನ, ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಬಾಬು ಕೊರಗ ಕಡ್ತಲ ಮತ್ತು ಅಮ್ಮಿ ಕೊರಗ ಕಡ್ತಲ ಇವರಿಂದ ‘ಸಾಂಪ್ರದಾಯಿಕ ಬುಟ್ಟಿ ತಯಾರಿಕಾ ಕಾರ್ಯಾಗಾರ’ ಹಾಗೂ ಸದಾನಂದ ಗುಡಿಗ ಕೆರುವಾಶೆ ಮತ್ತು ಪ್ರಶಾಂತ್ ಗುಡಿಗ ಕೆರುವಾಶೆ ಇವರಿಂದ ‘ಸಾಂಪ್ರದಾಯಿಕ ಕಡೆಗೋಲು ತಯಾರಿಕಾ ಪ್ರಾತ್ಯಕ್ಷಿಕೆ’, ದಿನಾಂಕ 24 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಕಾರ್ ಸ್ಟ್ರೀಟ್ ಬಿ.ಇ.ಎಂ. ಹೈಸ್ಕೂಲ್ ನಲ್ಲಿ ಗುರುಅಮ್ಮ ಇವರಿಂದ ಶಾಲಾ ಮಕ್ಕಳಿಗಾಗಿ ‘ಬುಟ್ಟಿ ತಯಾರಿಕಾ ಕಾರ್ಯಾಗಾರ’, ದಿನಾಂಕ 25 ನವೆಂಬರ್ 2024ರಂದು ಸಂಜೆ 5-30 ಗಂಟೆಗೆ ‘ದಿ ವರ್ಡ್ ಅಂಡ್ ದಿ ಟೀಚರ್’ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಲಿದೆ. ಪ್ರದರ್ಶನವು ದಿನಾಂಕ 29 ನವೆಂಬರ್ 2025ರವೆರೆಗೆ ಪ್ರತಿದಿನ ಸಾರ್ವಜನಿಕರಿಗೆ ತೆರೆದಿರುತ್ತದೆ.

