ಶಿವಮೊಗ್ಗ : ಶ್ರೀ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಲಿ ಶ್ರೀ ಕ್ಷೇತ್ರ ಸೋಮವಾರಸಂತೆ ಇದರ 25ನೇ ವರ್ಷದ ಪ್ರದರ್ಶನವನ್ನು ದಿನಾಂಕ 21 ನವೆಂಬರ್ 2025ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಹೆದ್ದೂರು ಹೊಸಳ್ಳಿಯಲ್ಲಿ ನಡೆಯಲಿದೆ.
ಯಕ್ಷಗಾನ ಕಲಾ ಪೋಷಕರಾದ ಸತ್ಯ ನಾರಾಯಣ ರಾವ್ ಕೂಳೂರು ಇವರು ಈ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಲಿದ್ದು, ಹೊಸಳ್ಳಿಯ ಶ್ರೀ ಗುತ್ಯಮ್ಮ ದೇವಸ್ಥಾನದ ಅಧ್ಯಕ್ಷರಾದ ಬಿ. ವಿ. ನಾಗರಾಜ ಗೌಡ್ರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಪಾದಕರಾದ ಬಿ. ಗಣಪತಿ, ಕಲಾವಿದರಾದ ಎಂ. ಕೆ. ರಮೇಶ್ ಆಚಾರ್ಯ, ಯಕ್ಷಗಾನ ಭಾಗವತರಾದ ಮಂಜುನಾಥ ಗೌಡ ಮತ್ತು ಮದ್ದಳೆ ವಾದಕರಾದ ಗಣೇಶ್ ಮೂರ್ತಿ ಇವರಿಗೆ ‘ರಜತವರ್ಷ ಯಕ್ಷಾಭಿವಂದನಂ’ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ‘ಶ್ರೀ ಸೋಮವಾರಸಂತೆ ಕ್ಷೇತ್ರ ಮಹಾತ್ಮೆ’ ಪ್ರಸಂಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

