ಯು.ಎ.ಇ. : ರಾಕ್ ಕರ್ನಾಟಕ ಸಂಘ ಯು.ಎ.ಇ. ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ‘ಮನರಂಜನೆಯ ಮಹಾ ಸಂಗಮ’ ಕಾರ್ಯಕ್ರಮವನ್ನು ದಿನಾಂಕ 22 ನವೆಂಬರ್ 2025ರಂದು ಸಂಜೆ 3-00 ಗಂಟೆಗೆ ಯು.ಎ.ಇ. ಇಲ್ಲಿನ ಇಂಡಿಯನ್ ಅಸೋಸಿಯೇಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಝೀ ಕನ್ನಡ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ಇವರಿಂದ ‘ಸಂಗೀತ ಗಾನಾಮೃತ’, ಸಿನೆಮಾ – ಟಿವಿ ಹಾಸ್ಯ ನಟ ಮಿಮಿಕ್ರಿ ಗೋಪಿ ಇವರಿಂದ ‘ಕಾಮಿಡಿ ದರ್ಬಾರ್’ ಮತ್ತು ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಇವರಿಂದ ‘ಜಾದೂ ಕಮಾಲ್’ ಪ್ರದರ್ಶನಗೊಳ್ಳಲಿದೆ.

